ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಧಾನವಾಗಿ ಇಳಿಮುಖವಾಗುತ್ತಿದೆ. ಇಂದು 1977 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ವೇಳೆ ಒಂದೇ ದಿನ 3188 ಜನ ಗುಣಮುಖರಾಗಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಸದ್ಯ ಸಕ್ರಿಯವಾಗಿರುವ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 32,383ಕ್ಕೆ ಇಳಿಕೆ ಕಂಡಿದೆ. ರಾಜ್ಯಾದ್ಯಂತ ಈವರೆಗೆ ವೈರಸ್ನಿಂದ ಗುಣಮುಖರಾದವರ ಸಂಖ್ಯೆ 28,101,21 ಕ್ಕೆ ಏರಿಕೆ ಕಂಡಿದೆ.
ಕೋವಿಡ್-19 ಸೋಂಕಿಗೆ ಈವರೆಗೆ ರಾಜ್ಯದಲ್ಲಿ ಮೃತರಾದವರ ಸಂಖ್ಯೆ 36,037ಕ್ಕೆ ಏರಿದ್ದು, ಇಂದು 48 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಈವರೆಗೂ ಕೊರೊನಾ ಸೋಂಕಿತರ ಸಂಖ್ಯೆ 28,78,564ಕ್ಕೆ ಏರಿಕೆ ಕಂಡಿದ್ದು, ಒಟ್ಟು 13787 ರೋಗಿಗಳು ಹೋಂ ಐಸೋಲೇಷಮ್ ನಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು 462 ಜನ ಸೋಂಕಿಗೆ ಒಳಗಾಗಿದ್ದು, 10 ಜನ ಸಾವನ್ನಪ್ಪಿದ್ದಾರೆ.
ಓದಿ:ನಟ ದರ್ಶನ್ ಹಲ್ಲೆ ಆರೋಪ: ತಪ್ಪಿದ್ದರೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿ- ಕುಮಾರಸ್ವಾಮಿ