ಬೆಂಗಳೂರು: ರೋಗಿಗಳಿಲ್ಲದೆ ಹಲವು ಕಡೆ ಕೋವಿಡ್ ಆರೈಕೆ ಕೇಂದ್ರಗಳು ಮುಚ್ಚಿದ್ದರೆ, ಇದೀಗ ಹೊಸದಾಗಿ ಕೇಂದ್ರ ಆರಂಭಿಸಲಾಗಿದೆ.
ಸರ್ವಜ್ಞ ನಗರದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭ: ಸಚಿವ ಸೋಮಣ್ಣ ಚಾಲನೆ - ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿದ ಸಚಿವ ವಿ. ಸೋಮಣ್ಣ
ಸಚಿವ ವಿ.ಸೋಮಣ್ಣ ಕೋವಿಡ್ ನಿಯಂತ್ರಣ ಉಸ್ತುವಾರಿ ಸಚಿವರಾಗಿರುವ ಪೂರ್ವ ವಲಯದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಸರ್ವಜ್ಞ ನಗರ ವಲಯದ ಹೆಚ್ಬಿಆರ್ ಲೇಔಟ್ನ ಕಾಚರಕನಹಳ್ಳಿಯ ಶ್ರೀ ಸಾಯಿ ಕಲಾಮಂದಿರದಲ್ಲಿ 180 ಹಾಸಿಗೆ ವ್ಯವಸ್ಥೆ ಹೊಂದಿರುವ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಲಾಯಿತು.
ಹೌದು, ಸಚಿವ ವಿ.ಸೋಮಣ್ಣ ಕೋವಿಡ್ ನಿಯಂತ್ರಣ ಉಸ್ತುವಾರಿ ಸಚಿವರಾಗಿರುವ ಪೂರ್ವ ವಲಯದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಸರ್ವಜ್ಞ ನಗರ ವಲಯದ ಹೆಚ್ಬಿಆರ್ ಲೇಔಟ್ನ ಕಾಚರಕನಹಳ್ಳಿಯ ಶ್ರೀ ಸಾಯಿ ಕಲಾಮಂದಿರದಲ್ಲಿ 180 ಹಾಸಿಗೆ ವ್ಯವಸ್ಥೆ ಹೊಂದಿರುವ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಲಾಯಿತು. ಈ ವೇಳೆ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಪಾಲಿಕೆ ಅಧಿಕಾರಿಗಳು ಭಾಗಿಯಾಗಿದ್ರು.
ಪೂರ್ವ ವಲಯದ ಸರ್ವಜ್ಞ ನಗರ, ಪುಲಕೇಶಿನಗರ, ಶಾಂತಿನಗರ, ಶಿವಾಜಿನಗರ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಬಡವರು ವಾಸ ಇರುವುದರಿಂದ ಮನೆಗಳಲ್ಲಿ ಐಸೋಲೇಟ್ ಆಗಲು ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಕೋವಿಡ್ ಆರೈಕೆ ಕೇಂದ್ರ ಪ್ರತೀ ಕ್ಷೇತ್ರಕ್ಕೂ ಅಗತ್ಯವಿದೆ ಎಂದು ಸ್ಥಳೀಯ ಶಾಸಕರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಸರ್ವಜ್ಞ ನಗರದಲ್ಲಿ ಸಿಸಿಸಿ ಕೇಂದ್ರ ಆರಂಭಿಸಲಾಗಿದೆ.