ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ದೊರಕದೆ ದಿನೇ ದಿನೆ ಕೋವಿಡ್ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳು ಸಹ ಆ್ಯಂಬುಲೆನ್ಸ್ ನಲ್ಲೇ ಹಾಗೂ ನಡುಬೀದಿ ಹೀಗೆ ಎಲ್ಲೆಂದರಲ್ಲಿ ಪ್ರಾಣ ಬಿಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಈ ಮಧ್ಯೆ ನಗರದ ಅಪಾರ್ಟ್ಮೆಂಟ್ ನಿವಾಸಿಗಳು ತಮಗೂ ಇದೇ ರೀತಿ ಸಮಸ್ಯೆ ಎದುರಾಗಬಾರದು ಎಂದು ಒಂದೊಳ್ಳೆ ಐಡಿಯಾ ಮಾಡಿದ್ದಾರೆ.
ಆಕ್ಸಿಜನ್ ಹಾಗೂ ಬೆಡ್ ಗಾಗಿ ಕಾದು ಕುಳಿತರೆ ಪ್ರಾಣಪಕ್ಷಿ ಹಾರಿ ಹೋಗುವ ಆತಂಕದಿಂದ ಇಲ್ಲಿನ ಅಪಾರ್ಟ್ ವೊಂದರಲ್ಲಿ ಮಿನಿ ಕೊರೊನಾ ಕೇರ್ ಸೆಂಟರ್ ಆರಂಭಿಸಲಾಗಿದೆ. ಯಶವಂತಪುರದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ನಿವಾಸಿಗಳು ಒಗ್ಗೂಡಿ ಮನೆಯಂಗಳದಲ್ಲಿ ಐದು ಬೆಡ್ ಹಾಗೂ ಆಕ್ಸಿಜನ್ ಸೌಲಭ್ಯವಿರುವ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿದ್ದಾರೆ.