ಕರ್ನಾಟಕ

karnataka

ETV Bharat / state

ಕೋವಿಡ್ 3ನೇ ಅಲೆ ಕೋರ್ಟ್ ಮುಚ್ಚಲು ಕಾರಣವಾಗಬಾರದು : ಸಿಜೆ ಎ.ಎಸ್ ಓಕ

ಕೋವಿಡ್ 3ನೇ ಅಲೆಯು ಕೋರ್ಟ್​ಗಳನ್ನು ಮತ್ತೊಮ್ಮೆ ಮುಚ್ಚಿಸಲು ಕಾರಣವಾಗಬಾರದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅಭಿಪ್ರಾಯಪಟ್ಟಿದ್ದಾರೆ.ಅಲ್ಲದೇ, ನ್ಯಾಯಾಲಯದ ಕಾರ್ಯ ಕಲಾಪ ಕೋವಿಡ್ ಹರಡುವಿಕೆಗೆ ಕಾರಣವಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದೂ ಹೇಳಿದ್ದಾರೆ..

By

Published : Jun 25, 2021, 11:01 PM IST

oka
oka

ಬೆಂಗಳೂರು : ಕೋವಿಡ್​ನಿಂದಾಗಿ ನ್ಯಾಯಾಲಯಗಳ ಸಾಕಷ್ಟು ಕೆಲಸದ ದಿನಗಳು ಹಾಳಾಗಿವೆ. ಬಾಕಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ, ಕೋವಿಡ್ 3ನೇ ಅಲೆಯು ಕೋರ್ಟ್​ಗಳನ್ನು ಮತ್ತೊಮ್ಮೆ ಮುಚ್ಚಿಸಲು ಕಾರಣವಾಗಬಾರದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅಭಿಪ್ರಾಯಪಟ್ಟಿದ್ದಾರೆ.

ಬೀದರ್ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ನಿರ್ಮಿಸಿರುವ ವಸತಿ ಸಮುಚ್ಛಯಗಳನ್ನು ಆನ್​ಲೈನ್ ಮೂಲಕ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಜೆ ಎ.ಎಸ್ ಓಕ ಕೋವಿಡ್​ನಿಂದಾದ ಸಮಸ್ಯೆಗಳ ಕುರಿತು ವಿವರಿಸಿದರು.

2020 ಹಾಗೂ 2021ನೇ ವರ್ಷದಲ್ಲಿ ಕೋವಿಡ್​ನಿಂದಾಗಿ ನ್ಯಾಯಾಂಗದ ಕಾರ್ಯಕಲಾಪಗಳಿಗೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ 3ನೇ ಅಲೆಯು ಕೋರ್ಟ್​​ಗಳನ್ನು ಮುಚ್ಚಲು ಕಾರಣವಾಗಬಾರದು. ಹೀಗಾಗಿ ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದರು.

ನ್ಯಾಯಾಲಯಗಳನ್ನು ಮುಚ್ಚುವುದರಿಂದ ನ್ಯಾಯಾಲಯಗಳಿಗಷ್ಟೇ ಅಲ್ಲ, ಕಕ್ಷಿದಾರರಿಗೆ, ವಕೀಲರಿಗೂ ಸಾಕಷ್ಟು ತೊಂದರೆಯಾಗಿದೆ. ಅದರಲ್ಲೂ ಯುವ ವಕೀಲರು ಹೆಚ್ಚು ಸಮಸ್ಯೆಗೆ ಒಳಗಾಗಿದ್ದಾರೆ. ಈ ಅವಧಿಯಲ್ಲಿ ಅವರ ಸಂಪಾದನೆಯೇ ಇಲ್ಲವಾಗಿದೆ ಎಂದು ಕಿರಿಯ ವಕೀಲರ ಕುರಿತು ಮರುಕ ವ್ಯಕ್ತಪಡಿಸಿದರು.

ಅಲ್ಲದೇ, ನ್ಯಾಯಾಲಯದ ಕಾರ್ಯ ಕಲಾಪ ಕೋವಿಡ್ ಹರಡುವಿಕೆಗೆ ಕಾರಣವಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಜತೆಗೆ, ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ವಕೀಲರು ಸಹಕರಿಸಬೇಕು. ಕೋರ್ಟ್ ಕಲಾಪಗಳನ್ನು ಯಶಸ್ವಿಯಾಗಿ ನಡೆಸಲು ವಕೀಲರು ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾರೆ ಎಂದು ಸಿಜೆ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details