ಬೆಂಗಳೂರು:ನಗರದ ಕೆ.ಆರ್.ಪುರಂದ ದೇವಸಂದ್ರ ವಾರ್ಡ್ನಲ್ಲಿ ಹೂ ಮಾರುವ ವ್ಯಕ್ತಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಿರುವುದು ಜನರನ್ನು ಆತಂಕಕ್ಕೀಡುಮಾಡಿದೆ.
ಕೆ.ಆರ್.ಪುರಂದ ದೇವಸಂದ್ರ ವಾರ್ಡ್ನಲ್ಲಿ ಹೂ ಮಾರುವ ವ್ಯಕ್ತಿಗೆ ಕೊರೊನಾ ದೃಢ - Covid -19 positive in k r pura
ಕೆ.ಆರ್.ಪುರದ ದೇವಸಂದ್ರ ವಾರ್ಡ್ನಲ್ಲಿ ಹೂ ಮಾರಾಟ ಮಾಡುವ ವ್ಯಕ್ತಿಗೆ ಕೋವಿಡ್-19 ತಗುಲಿರುವುದು ಜನರನ್ನು ಬೆಚ್ಚಿಬೀಳಿಸಿದೆ.

ಹೂ ಮಾರುವ ವ್ಯಕ್ತಿಗೆ ಕೊರೊನಾ
ಸೋಂಕಿತನು ಕೆ.ಆರ್.ಪುರಂದ ವಿನಾಯಕ ದೇವಸ್ಥಾನದ ಮುಂದೆ ಹೂವಿನ ವ್ಯಾಪಾರ ಮಾಡುತ್ತಿದ್ದ. ಮೂರ್ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಂತರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ತಗುಲಿರುವುದು ಖಚಿತವಾಗಿದೆ. ಮಾರುಕಟ್ಟೆಗೆ ಬಂದಿದ್ದ ರೈತರು, ವ್ಯಾಪಾರಸ್ಥರು ಭಯಭೀತರಾಗುವಂತಾಗಿದೆ.
ಗುರುವಾರ ಕೂಡ ದೇವಸಂದ್ರ ವಾರ್ಡಿನ ಬಿಎಂಟಿಸಿ ನಿರ್ವಾಹಕನಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಕ್ಲಿನಿಕ್ ರಸ್ತೆಯನ್ನ ಸಂಪೂರ್ಣ ಸೀಲ್ಡೌನ್ ಮಾಡಲಾಗಿತ್ತು.