ಬೆಂಗಳೂರು: ರಾಜ್ಯದಲ್ಲಿನ ಪ್ರಚಲಿತ ಕೋವಿಡ್ ಪರಿಸ್ಥಿತಿಯನ್ನು ಆಧರಿಸಿ ಸೋಂಕು ಉಲ್ಬಣಗೊಳ್ಳುವುದನ್ನು ಅದರಲ್ಲೂ ಪ್ರಮುಖವಾಗಿ ಒಮಿಕ್ರಾನ್ ಸೋಂಕಿನ ಹರಡುವಿಕೆ ನಿಯಂತ್ರಿಸಲು ಜನವರಿ 4 ರಿಂದ ಫೆಬ್ರವರಿ 15ರ ವರೆಗೆ ನಿಯಂತ್ರಣ ಕ್ರಮಗಳನ್ನ ಜಾರಿಗೊಳಿಸಿತ್ತು. ಇದೀಗ ಸರ್ಕಾರದ ನಿಯಂತ್ರಣ ಕ್ರಮದ ಆದೇಶ ಮುಗಿದ ಕಾರಣಕ್ಕೆ ಪರಿಷ್ಕೃತ ಆದೇಶ ಹೊರಡಿಸಿದೆ.
ಸದ್ಯ ರಾಜ್ಯದಲ್ಲಿ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಮತ್ತು ಪರೀಕ್ಷೆಯ ಪಾಸಿಟಿವ್ ದರದಲ್ಲಿ ಸ್ಥಿರವಾಗಿ ಇಳಿಕೆ ಕಂಡು ಬರುತ್ತಿದೆ. ರಾಜ್ಯದಲ್ಲಿನ ಕೋವಿಡ್ ಪ್ರಕರಣಗಳ ಹೊರೆ ಇನ್ನೂ ಕಡಿಮೆ ಮಾಡಲು ಕೋವಿಡ್ ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕಾಕರಣ ಮತ್ತು ಕೋವಿಡ್ ವರ್ತನೆಗಳನ್ನು( ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು, ಸ್ವಚ್ಛತೆಗೆ ಗಮನ ಕೊಡುವುದು) ಕಟ್ಟುನಿಟ್ಟಾಗಿ ಅನುಸರಿಸುವುದು ಮೊದಲಾದ ಐದು ಕಾರ್ಯತಂತ್ರಗಳನ್ನು ಮುಂದುವರೆಸುವಂತೆ ಆದೇಶಿಸಲಾಗಿದೆ.