ಬೆಂಗಳೂರು :ರಾಜ್ಯದಲ್ಲಿಂದು 1,52,714 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 1,639 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,88,341ಕ್ಕೆ ಏರಿಕೆಯಾಗಿದೆ.
Covid-19 Karnataka Update : 1639 ಮಂದಿಗೆ ಕೋವಿಡ್ ಸೋಂಕು, 36 ಮಂದಿ ಸಾವು - Bangalore latest update news
ರಾಜ್ಯದಲ್ಲಿ ಇಂದು ಪತ್ತೆಯಾದ ಕೋವಿಡ್ ಹೊಸ ಪ್ರಕರಣಗಳು, ಗುಣಮುಖರು ಹಾಗು ಸಕ್ರಿಯ ಪ್ರಕರಣಗಳ ವಿವರ ಇಲ್ಲಿದೆ..
![Covid-19 Karnataka Update : 1639 ಮಂದಿಗೆ ಕೋವಿಡ್ ಸೋಂಕು, 36 ಮಂದಿ ಸಾವು Covid-19 Karnataka Update](https://etvbharatimages.akamaized.net/etvbharat/prod-images/768-512-12530112-thumbnail-3x2-net.jpg)
ರಾಜ್ಯದ ಕೋವಿಡ್ ವರದಿ
ಪಾಸಿಟಿವಿಟಿ ದರ 1.07% ರಷ್ಟಿದೆ. ಇಂದು 2214 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,26,411 ಜನರು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 25,645ರಷ್ಟು ಸಕ್ರಿಯ ಪ್ರಕರಣಗಳಿವೆ. ಇಂದು 36 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 36,262ಕ್ಕೆ ಏರಿದೆ. ಸಾವಿನ ಶೇಕಡವಾರು ಪ್ರಮಾಣ 2.19 ರಷ್ಟಿದೆ.
ಇದನ್ನೂ ಓದಿ:ಮತ್ತೆ ಕೊರೊನಾ ತಲ್ಲಣ: ಕಳೆದ 24 ಗಂಟೆಯಲ್ಲಿ 3,998 ಮಂದಿ ಬಲಿ!