ಬೆಂಗಳೂರು: ಪೊಲೀಸರಲ್ಲಿ ಇತ್ತೀಚೆಗೆ ಹೆಚ್ಚಾಗಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬರುತ್ತಿದ್ದು, ಸದ್ಯ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್, ಹೆಣ್ಣೂರ್, ಜೆ.ಜೆನಗರ, ಬೈಯಪ್ಪನಹಳ್ಳಿ, ಜಯನಗರ, ಬಾಗಲಗುಂಟೆ ಠಾಣೆಯ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾದ ಕಾರಣ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಪೊಲೀಸ್ ಇಲಾಖೆಗೂ ವೈರಾಣು ಕಾಟ: ನಗರದಲ್ಲಿ ಸೀಲ್‌ಡೌನ್ ಆದ ಠಾಣೆಗಳೆಷ್ಟು? - Corona virus found in police
ಸೀಲ್‌ಡೌನ್ ಆಗಿರುವ ಪೊಲೀಸ್ ಠಾಣೆಗಳಲ್ಲಿ ಸೋಂಕು ನಿವಾರಣೆಗೆ ಸೂಕ್ತ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಯಾರೂ ಕೂಡ ಠಾಣೆಗೆ ಬಾರದಂತೆ ನೋಟಿಸ್ ಅಳವಡಿಸಲಾಗಿದೆ. ಒಂದು ವೇಳೆ ದೊಡ್ಡಮಟ್ಟದಲ್ಲಿ ಅಪರಾಧ ಪ್ರಕರಣಗಳು ನಡೆದರೆ ತಕ್ಷಣ ನಮ್ಮ ದೂರವಾಣಿ ಸಂಖ್ಯೆ 100 ಕ್ಕೆ ಕರೆ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಠಾಣಾ ಸಿಬ್ಬಂದಿಯಲ್ಲಿ ಆತಂಕ ನಿರ್ಮಾಣವಾಗಿದೆ. ಇನ್ನೊಂದೆಡೆ, ಪ್ರತಿ ದಿನ ಪೊಲೀಸ್ ಠಾಣೆಗೆ ಅನೇಕ ದೂರುದಾರರು ಬರುತ್ತಾರೆ. ಠಾಣೆಗಳಲ್ಲಿ ಸೋಂಕು ನಿವಾರಣೆಗೆ ಸೂಕ್ತ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಯಾರೂ ಕೂಡ ಠಾಣೆಗೆ ಬಾರದಂತೆ ನೋಟಿಸ್ ಅಳವಡಿಕೆ ಮಾಡಲಾಗಿದೆ. ಒಂದು ವೇಳೆ ದೊಡ್ಡಮಟ್ಟದಲ್ಲಿ ಅಪರಾಧ ಪ್ರಕರಣಗಳು ನಡೆದರೆ ತಕ್ಷಣ ನಮ್ಮ ದೂರವಾಣಿ ಸಂಖ್ಯೆ 100 ಕ್ಕೆ ಕರೆ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಸೀಲ್‌ಡೌನ್ ಆದ ಠಾಣೆಗಳ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಧೈರ್ಯ ತುಂಬಿದ್ದಾರೆ. ಎಲ್ಲಾ ಸಿಬ್ಬಂದಿ ಜಾಗ್ರತೆಯಿಂದ ಕಾರ್ಯ ನಿರ್ವಹಣೆ ಮಾಡಬೇಕು. ಸಿಬ್ಬಂದಿ ಸೀಲ್‌ಡೌನ್ ಆದ ಠಾಣೆಯ ಹೊರಗಡೆ ಮಾತ್ರ ಕೆಲಸ ಮಾಡಿ, ಇಮ್ಯೂನಿಟಿ ಪವರ್ ಹೆಚ್ಚಿಸುವಂತಹ ಆಹಾರ ಸೇವನೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ.