ಕರ್ನಾಟಕ

karnataka

ETV Bharat / state

ದೇಶದಲ್ಲಿ ಲಾಕ್‌ಡೌನ್‌ಗೂ ಮೊದಲೇ ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಮಹಾ ಆಘಾತವಾಗಿದ್ದು ಹೇಗೆ ಗೊತ್ತಾ?

ಭಾರತದಲ್ಲಿ ಕೋವಿಡ್‌-19 ತಡೆಯಲು ಮಾರ್ಚ್ 24ಕ್ಕೆ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಆದ್ರೆ ಅದಕ್ಕೂ ಮೊದಲೇ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಕೊರೊನಾ ದೊಡ್ಡ ಆಘಾತ ನೀಡಿದೆ. ಇಲ್ಲಿನ ಸಾಫ್ಟ್‌ವೇರ್ ಕಂಪನಿಗಳಿಗೆ ಬಹುಪಾಲು ಕೆಲಸ ನೀಡುತ್ತಿರುವ ಯುರೋಪ್ ರಾಷ್ಟ್ರಗಳಲ್ಲಿ ಕೊರೊನಾ ಅಟ್ಟಹಾಸ ಮೊದಲೇ ಆರಂಭವಾಗಿತ್ತು. ಆ ಸಮಯದಲ್ಲೇ ಸಾಫ್ಟ್‌ವೇರ್ ವಲಯಕ್ಕೆ ಹೊಡೆತ ಬಿದ್ದಿದೆ.

covid-19-effect-it-companies-facing-lot-of-problems-in-bengaluru
ದೇಶದಲ್ಲಿ ಲಾಕ್‌ಡೌನ್‌ಗೂ ಮೊದಲೇ ಸಾಫ್ಟ್‌ವೇರ್‌ ಕ್ಷೇತ್ರ ಮಹಾ ಆಘಾತವಾಗಿದ್ದು ಹೇಗೆ ಗೊತ್ತಾ?

By

Published : Jun 13, 2020, 9:45 PM IST

ಬೆಂಗಳೂರು: ಕೋವಿಡ್‌-19 ಕೊಟ್ಟಿರುವ ಹೊಡೆತದಿಂದ ಮತ್ತೆ ಆರ್ಥಿಕ ಕ್ಷೇತ್ರ ಪುಟಿದೇಳಬೇಕಾದರೆ ವರ್ಷಗಳೇ ಬೇಕು. ಸಾಫ್ಟ್‌ವೇರ್ ಕ್ಷೇತ್ರವಂತೂ ಸಂಪೂರ್ಣ ನೆಲಕಚ್ಚಿದೆ. ಪ್ರತಿಯೊಂದು ವಲಯಕ್ಕೂ ದೊಡ್ಡಮಟ್ಟದ ಆರ್ಥಿಕ ಸಂಕಷ್ಟ ತಂದಿಟ್ಟಿರುವ ಮಹಾಮಾರಿ ಕೋವಿಡ್‌ ಕಳೆದ ಮೂರು ತಿಂಗಳಿಂದ ಸಾಫ್ಟ್‌ವೇರ್‌ ಉದ್ಯೋಗಿಗಳನ್ನು ಕೈಕಟ್ಟಿ ಕೂರುವಂತೆ ಮಾಡಿದೆ. ದೇಶದಲ್ಲಿ ಲಾಕ್‌ಡೌನ್‌ ಏರಿಕೆಗೂ ಮುನ್ನವೇ ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಹೊಡೆತ ನೀಡಿದೆ.

ದೇಶದಲ್ಲಿ ಲಾಕ್‌ಡೌನ್‌ಗೂ ಮೊದಲೇ ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಮಹಾ ಆಘಾತವಾಗಿದ್ದು ಹೇಗೆ ಗೊತ್ತಾ?

ದೇಶದಲ್ಲಿ ಮಾರ್ಚ್ 24ಕ್ಕೆ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಆದ್ರೆ ಅದಕ್ಕೂ ಮೊದಲೇ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಕೊರೊನಾ ದೊಡ್ಡ ಆಘಾತ ನೀಡಿದೆ. ಇಲ್ಲಿನ ಸಾಫ್ಟ್‌ವೇರ್ ಕಂಪನಿಗಳಿಗೆ ಬಹುಪಾಲು ಕೆಲಸ ನೀಡುತ್ತಿರುವ ಯುರೋಪ್ ರಾಷ್ಟ್ರಗಳು, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೊನಾ ಅಟ್ಟಹಾಸ ಮೊದಲೇ ಆರಂಭವಾಗಿತ್ತು. ಆ ಸಮಯದಲ್ಲೇ ಸಾಫ್ಟ್‌ವೇರ್ ವಲಯಕ್ಕೆ ಹೊಡೆತ ಬಿದ್ದಿದೆ.

ದೇಶದ ಐಟಿಬಿಟಿ ನಗರ ಬೆಂಗಳೂರು ಹಾಗೂ ಇತರೆ ನಗರಗಳಲ್ಲಿನ ಸಾಫ್ಟ್‌ವೇರ್ ಕಂಪನಿಗಳು ಮಾರ್ಚ್ ಮೊದಲ ವಾರದಿಂದಲೇ ಕಾರ್ಯ ಸ್ಥಗಿತಗೊಳಿಸಿವೆ. ಮನೆಯಿಂದಲೇ ಕೆಲವರಿಗೆ ಕೆಲಸ ಮಾಡಲು ಸೂಚಿಸಲಾಗಿದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಚೇರಿಗೆ ತೆರಳಿ ಕೆಲಸ ಆರಂಭಿಸಿದ್ದಾರೆ. ವಿಪರ್ಯಾಸವೆಂದರೆ ಆರಂಭದಿಂದಲೂ ಇಂದಿನವರೆಗೂ ಸಾಕಷ್ಟು ಮಂದಿ ಹಂತಹಂತವಾಗಿ ಉದ್ಯೋಗ ಕಳೆದುಕೊಂಡಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಸೇರ್ಪಡೆಯಾಗಿದ್ದ ಒಂದು ವರ್ಷದೊಳಗಿನ ತರಬೇತಿ ಸಿಬ್ಬಂದಿಗಳಲ್ಲಿ ಶೇ.70ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉಳಿದಂತೆ ಹೊಸ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದ ಟೆಕ್ಕಿಗಳು, ಹೆಚ್ಚು ಸಂಬಳ ಪಡೆಯುತ್ತಿದ್ದರು ಹಾಗೂ ವಿವಿಧ ಕಾರಣಗಳಿಂದ ಮೇಲಿಂದ ಮೇಲೆ ರಜೆ ತೆಗೆದುಕೊಳ್ಳುತ್ತಿದ್ದ ಸಿಬ್ಬಂದಿ ಕೂಡ ಹೇಳದೆ ಕೇಳದೆ ಕಂಪನಿಯಿಂದ ಕೆಂಪು ಚೀಟಿ ಪಡೆದಿದ್ದಾರೆ.

ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದ ಹಾಗೂ ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದ ಅನೇಕ ಮಂದಿ ತಿಂಗಳೊಳಗೆ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಒಂದು ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟೆಕ್ಕಿಗಳಲ್ಲಿ ಅರ್ಧದಷ್ಟು ಮಂದಿ ಅತಂತ್ರ ಸ್ಥಿತಿ ಎದುರಿಸಿದ್ದಾರೆ. ಆದ್ರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.

ಲಾಕ್‌ಡೌನ್‌ ಸಡಿಲಿಕೆ ನಂತರ ಮಾರ್ಗಸೂಚಿಗಳ ಪಾಲನೆಯೊಂದಿಗೆ ಬಹುತೇಕ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳು ಆರಂಭವಾಗಿವೆ. ಆದ್ರೆ ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ. ಸದ್ಯಕ್ಕೆ ವರ್ಕ್‌ ಫ್ರಾಂ ಹೋಮ್‌ನಿಂದ ಕೊಂಚ ಮಟ್ಟಿಗೆ ಸುಧಾರಿಸಿದೆ. ಜಾಗತಿಕವಾಗಿ ಕೋವಿಡ್‌ನಿಂದ ಮುಕ್ತಿ ಹೊಂದುವ ಮೂಲಕ ಐಟಿಬಿಟಿ ಕ್ಷೇತ್ರಕ್ಕೆ ಮತ್ತೆ ಹೊಸ ಚೈತನ್ಯವನ್ನು ತುಂಬಬೇಕಿದೆ.

ABOUT THE AUTHOR

...view details