ಬೆಂಗಳೂರು: ರಾಜ್ಯದಲ್ಲಿಂದು 7,622 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 49 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 39,46,270 ಕ್ಕೆ ಏರಿಕೆ ಆಗಿದೆ.
ಪಾಸಿಟಿವ್ ದರ 0.64% ರಷ್ಟಿದೆ. 37 ಸೋಂಕಿತರು ಗುಣಮುಖರಾಗಿದ್ದಾರೆ. ಈತನಕ 39,04,730 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಈತನಕ 40,057 ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 1,441 ರಷ್ಟಿವೆ. ವಿಮಾನ ನಿಲ್ದಾಣದಿಂದ 1,812 ಪ್ರಯಾಣಿಕರು ತಪಾಸಣೆಗೊಳಪಟ್ಟು ಬಂದಿದ್ದಾರೆ.
ಬೆಂಗಳೂರಿನಲ್ಲಿ 47 ಮಂದಿಗೆ ವೈರಸ್ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 17,82,318 ಕ್ಕೆ ಏರಿಕೆ ಆಗಿದೆ. 33 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈತನಕ 17,63,992 ಏರಿಕೆ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ. ಮೃತರ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,363 ರಷ್ಟು ದಾಖಲಾಗಿದೆ.
ರೂಪಾಂತರಿ ವೈರಸ್ ಅಪ್ಡೇಟ್ಸ್:ಅಲ್ಪಾ- 156, ಬೇಟಾ- 08, ಡೆಲ್ಟಾ ಸಬ್ಲೈನ್ ಏಜ್- 4620, ಇತರೆ- 311, ಒಮಿಕ್ರಾನ್- 3775, BAI.1.529- 947, BA1- 99, BA2- 2729, ಒಟ್ಟು- 8890
ಇದನ್ನೂ ಓದಿ:ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಅನುಮಾನದ ಹುತ್ತ ಬೆಳೆದಿದೆ : ಸಿ.ಟಿ ರವಿ