ಬೆಂಗಳೂರು: ಕೆಲ ಆಯ್ದ ಸರ್ಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೆಕೆಂಡ್ ಡೋಸ್ ಕೋವ್ಯಾಕ್ಸಿನ್ ಇಂದಿನಿಂದ ಲಭ್ಯವಾಗಿದೆ. ಈ ಮೊದಲು ಸೆಕೆಂಡ್ ಡೋಸ್ ಕೋವ್ಯಾಕ್ಸಿನ್ ಸಿಗದೆ ಸಾವಿರಾರು ಮಂದಿ ಪರದಾಡುತ್ತಿದ್ದರು. ಸದ್ಯಕ್ಕೆ ಸಿಲಿಕಾನ್ ಸಿಟಿ ಮಂದಿಗೆ ಬಿಗ್ ರಿಲೀಫ್ ಸಿಗಲಿದೆ. ಬಿಬಿಎಂಪಿ 8 ವಲಯಗಳಲ್ಲಿ ಕೆಲವು ಆಯ್ದ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಹಾಕುವ ವ್ಯವಸ್ಥೆ ಮಾಡಲಾಗಿದೆ.
27 ಸರ್ಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಮೇ 31 ರಿಂದ ಲಭ್ಯವಿರಲಿದೆ ಹಾಗು 2ನೇ ಡೋಸ್ಗೆ ಕಾಯುತ್ತಿರುವವರು ನೇರವಾಗಿ ವಾಕ್ ಇನ್ ಮೂಲಕ ಬಂದು ಲಸಿಕೆ ಪಡೆಯಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನಿನ್ನೆ ಮಾಹಿತಿ ನೀಡಿದ್ದರು.
ಕೋವ್ಯಾಕ್ಸಿನ್ 2ನೇ ಡೋಸ್ ಎಲ್ಲೆಲ್ಲಿ ಲಭ್ಯವಾಗಿರಲಿದೆ?:
1.ಬೊಮ್ಮನಹಳ್ಳಿ ವಲಯ:
- ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ - ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ
- ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ - ಅರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ
2.ದಾಸರಹಳ್ಳಿ ವಲಯ:
- ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ- ನೆಲಮಹೇಶ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರ