ಕರ್ನಾಟಕ

karnataka

ETV Bharat / state

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಫೋನ್ ಕದ್ದಾಲಿಕೆ ಆರೋಪ : ಸಿಬಿಐ ಬಿ ರಿಪೋರ್ಟ್ ತಿರಸ್ಕರಿಸಿದ ಕೋರ್ಟ್

ಬಿ ರಿಪೋರ್ಟ್ ವಜಾಗೊಳಿಸಿರುವ ನಗರದ 17ನೇ ಎಸಿಎಂಎಂ ಕೋರ್ಟ್ ಇಂತಹ ಪ್ರಕರಣವನ್ನು ಸಿಬಿಐ ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ಸೂಚಿಸಿ, ಬಿ ರಿಪೋರ್ಟ್​ನ್ನು ತಿರಸ್ಕರಿಸಿದೆ. ಇದೇ ವೇಳೆ ಬಿ ರಿಪೋರ್ಟ್​ ಅನ್ನೇ ದೋಷಾರೋಪ ಪಟ್ಟಿಯಾಗಿ ಪರಿಗಣಿಸಬೇಕೆಂಬ ಭಾಸ್ಕರ್ ರಾವ್ ಮನವಿಯನ್ನೂ ವಜಾಗೊಳಿಸಿದೆ..

court-rejected-cbi-b-report-in-phone-tapping-case
ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಫೋನ್ ಕದ್ದಾಲಿಕೆ ಆರೋಪ : ಸಿಬಿಐ ಬಿ ರಿಪೋರ್ಟ್ ತಿರಸ್ಕರಿಸಿದ ಕೋರ್ಟ್

By

Published : Oct 18, 2021, 9:14 PM IST

ಬೆಂಗಳೂರು :ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ದಾಖಲಾಗಿರುವ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ ಸಲ್ಲಿಸಿರುವ ಬಿ ರಿಪೋರ್ಟ್​ ಅನ್ನು ಕೋರ್ಟ್ ಅಂಗೀಕರಿಸಲು ನಿರಾಕರಿಸಿದೆ. ಹಾಗೆಯೇ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ.

2019ರ ಆಗಸ್ಟ್​​ನಲ್ಲಿ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಈ ಹುದ್ದೆಗೆ ಭಾಸ್ಕರ್ ರಾವ್ ಅವರನ್ನು ನಿಯೋಜಿಸಲಾಗಿತ್ತು. ಆ ಬಳಿಕ ಸೋರಿಕೆಯಾದ ಕೆಲವೊಂದು ಟೆಲಿಪೋನ್ ಸಂಭಾಷಣೆಗಳು ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿದ್ದವು.

ಟೆಲಿಫೋನ್ ಸಂಭಾಷಣೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ವಿವಾದಗಳು ಉದ್ಭವಿಸಿದ್ದರಿಂದ ಈ ಕುರಿತು ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಿ ಆದೇಶ ಹೊರಡಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ 2021ರ ಜೂನ್ 20ರಂದು ಬಿ ರಿಪೋರ್ಟ್ ಸಲ್ಲಿಸಿತ್ತು. ಈ ಬಿ ರಿಪೋರ್ಟ್ ಆಕ್ಷೇಪಿಸಿ ಭಾಸ್ಕರ್ ರಾವ್ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.

ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಸಂಬಂಧಿಸಿದಂತೆ ಭಾಸ್ಕರ್ ರಾವ್ ಹಾಗೂ ಫರಾಜ್ ಅಹ್ಮದ್ ನಡೆಸಿದ್ದ ಸಂಭಾಷಣೆಯ ಆಡಿಯೋ ತುಣುಕು ಟಿವಿ ಪತ್ರಕರ್ತೆಗೆ ಸಿಕ್ಕಿದ್ಹೇಗೆ ಎಂಬುದು ಪತ್ತೆಯಾಗಿಲ್ಲ ಎಂದು ಸಿಬಿಐ ಹೇಳಿದೆ. ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಆಕ್ಷೇಪಿಸಿದ್ದರು. ಜೊತೆಗೆ ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್​ ಅನ್ನೇ ದೋಷಾರೋಪ ಪಟ್ಟಿಯಾಗಿ ಪರಿಗಣಿಸಿ ವಿಚಾರಣೆ ನಡೆಸುವಂತೆ ಮೆಮೋ ಸಲ್ಲಿಸಿದ್ದರು.

ಬಿ ರಿಪೋರ್ಟ್ ವಜಾಗೊಳಿಸಿರುವ ನಗರದ 17ನೇ ಎಸಿಎಂಎಂ ಕೋರ್ಟ್ ಇಂತಹ ಪ್ರಕರಣವನ್ನು ಸಿಬಿಐ ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ಸೂಚಿಸಿ, ಬಿ ರಿಪೋರ್ಟ್​ನ್ನು ತಿರಸ್ಕರಿಸಿದೆ. ಇದೇ ವೇಳೆ ಬಿ ರಿಪೋರ್ಟ್​ ಅನ್ನೇ ದೋಷಾರೋಪ ಪಟ್ಟಿಯಾಗಿ ಪರಿಗಣಿಸಬೇಕೆಂಬ ಭಾಸ್ಕರ್ ರಾವ್ ಮನವಿಯನ್ನೂ ವಜಾಗೊಳಿಸಿದೆ.

ಇದನ್ನೂ ಓದಿ:ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಬಂಡವಾಳ! ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ: ಕೈ ಆಕ್ರೋಶಕಾರಿ ಟ್ವೀಟ್​

ABOUT THE AUTHOR

...view details