ಬೆಂಗಳೂರು :ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಅವರ ಬೆಂಬಲಿಗರಾದ ತಿಪ್ಪಾರೆಡ್ಡಿ ಅವರನ್ನ ಪ್ರಕರಣದಿಂದ ಕೈ ಬೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಒಪ್ಪಿಗೆ ಸೂಚಿಸಿದೆ.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ತಿಪ್ಪಾರೆಡ್ಡಿ ಕೈ ಬಿಡಲು ಕೋರ್ಟ್ ಆದೇಶ - Congress MLA P T Parameshwar Naik
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಅವರ ಬೆಂಬಲಿಗರಾದ ತಿಪ್ಪಾರೆಡ್ಡಿ ಅವರನ್ನ ಪ್ರಕರಣದಿಂದ ಕೈ ಬೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಒಪ್ಪಿಗೆ ಸೂಚಿಸಿದೆ.
![ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ತಿಪ್ಪಾರೆಡ್ಡಿ ಕೈ ಬಿಡಲು ಕೋರ್ಟ್ ಆದೇಶ](https://etvbharatimages.akamaized.net/etvbharat/prod-images/768-512-4650423-thumbnail-3x2-hcourt.jpg)
ಕೋರ್ಟ್
ಕಳೆದ ವಿಧಾನಸಭೆ ಚುನಾವಣೆ ವೇಳೆ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್, ತಿಪ್ಪಾರೆಡ್ಡಿಯವರ ತೋಟದಲ್ಲಿ ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿದ್ದರು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ತಿಪ್ಪಾರೆಡ್ಡಿ ಮತ್ತು ಶಾಸಕ ಪರಮೇಶ್ವರ್ ನಾಯಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 79 ರ ಇಳಿ ವಯಸ್ಸಿನ ತಮ್ಮನ್ನು ಪ್ರಕರಣದಿಂದ ಕೈ ಬಿಡಬೇಕೆಂದು ತಿಪ್ಪಾರೆಡ್ಡಿ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ತಿಪ್ಪಾರೆಡ್ಡಿ ಅವರನ್ನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ಕೈ ಬೀಡಲು ಆದೇಶಿಸಿದೆ.