ಕರ್ನಾಟಕ

karnataka

ETV Bharat / state

ಮಾಜಿ ಶಾಸಕ ವೈವಿಎಸ್ ದತ್ತ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ - undefined

ಬೇಲೂರು ಆರ್ ಸುಬ್ರಮಣ್ಯ ಎಂಬುವರ ಬಳಿ 5 ಲಕ್ಷ ಹಣ ಪಡೆದಿದ್ದ ದತ್ತ ಅವರು ವಾಪಸ್ಸು ಹಣ ನೀಡಲು ಚೆಕ್ ನೀಡಿ ಬಳಿಕ ಆ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣದ ಕುರಿತಂತೆ ಇಂದು ವಿಚಾರಣೆಗೆ ಹಾಜರಾಗದ ದತ್ತ ಅವರಿಗೆ ವಿಶೇಷ ನ್ಯಾಯಾಲಯ ವಾರೆಂಟ್​ ಜಾರಿ ಮಾಡಿದೆ.

ವೈವಿಎಸ್ ದತ್ತ

By

Published : Mar 23, 2019, 6:46 PM IST

ಬೆಂಗಳೂರು:ಮಾಜಿ ಶಾಸಕ ಹಾಗೂ ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷ ವೈ.ಎಸ್.ವಿ.ದತ್ತ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಹಲವು ಬಾರಿ ಸಮನ್ಸ್ ನೀಡಿದರೂ ವೈ.ಎಸ್.ವಿ. ದತ್ತ ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದು ಅರ್ಜಿ ವಿಚಾರಣೆ ನಡೆಸಿ‌ದ ಕೋರ್ಟ್​, ವಿಚಾರಣೆಗೆ ಹಾಜರಾಗುವಂತೆ ಜಾಮೀನು ರಹಿತ ವಾರೆಂಟ್ ಆದೇಶ ಹೊರಡಿಸಿದೆ. ಬೇಲೂರು ಆರ್ ಸುಬ್ರಮಣ್ಯ ಎಂಬುವರ ಬಳಿ 5 ಲಕ್ಷ ಹಣ ಪಡೆದಿದ್ದ ದತ್ತ ಅವರು ವಾಪಸ್ಸು ಹಣ ನೀಡಲು ಚೆಕ್ ನೀಡಿ ಬಳಿಕ ಆ ಚೆಕ್ ಬೌನ್ಸ್ ಆಗಿತ್ತು.

ಮತ್ತೊಂದು ಪ್ರಕರಣದಲ್ಲಿ ಕೆ.ಜಿ.ರಾಮರೆಡ್ಡಿ ಬಳಿ‌ ಹಣ ಪಡೆದು ವಾಪಸ್ಸು ನೀಡಿದ ಚೆಕ್ ಬೌನ್ಸ್ ಕೇಸ್ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

For All Latest Updates

TAGGED:

ABOUT THE AUTHOR

...view details