ಬೆಂಗಳೂರು : ಶಾಸಕ ಆನಂದ್ ಸಿಂಗ್ ಅವರನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಿಂದ ಮುಕ್ತಗೊಳಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಪ್ರಕರಣದಿಂದ ಆನಂದ್ ಸಿಂಗ್ರನ್ನ ಖುಲಾಸೆಗೊಳಿಸಿ ಜನಪ್ರತಿನಿಧಿ ನ್ಯಾಯಾಲಯ ಆದೇಶ ಹೊರಡಿಸಿದೆ. ರಾಜಕೀಯ ಬೆಳವಣಿಗೆ ಹಾಗೂ ವೈಯಕ್ತಿಕ ಕಾರಣದ ಹಿನ್ನೆಲೆ ಇಂದು ಕೋರ್ಟ್ಗೆ ಆನಂದ್ ಸಿಂಗ್ ಗೈರುಹಾಜರಾಗಿದ್ರು. ಆದ್ರೆ ಸಿಂಗ್ ಪರ ವಕೀಲರು ಹಾಜರಾಗಿದ್ದರು. ಈ ವೇಳೆ ಜನಪ್ರತಿನಿಧಿ ನ್ಯಾಯಾಲಯದ ವಿಶೇಷ ನ್ಯಾಯಧೀಶ ರಾಮಚಂದ್ರ ಹುದ್ದಾರ್ ಅವರು ಆನಂದ್ ಸಿಂಗ್ ಅವರನ್ನು ಕೇಸ್ನಿಂದ ಆರೋಪ ಮುಕ್ತಗೊಳಿಸಿದ್ದಾರೆ.