ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧದಲ್ಲಿ ಬೇನಾಮಿ ಆಸ್ತಿಗಳ ವಹಿವಾಟುಗಳ ಕಾಯಿದೆ ಸೆಕ್ಷನ್ (2) ಅಡಿಯಲ್ಲಿ ದಾಖಲಿಸಿಕೊಂಡಿದ್ದ 4 ಪ್ರಕರಣಗಳನ್ನು ನಗರದ ನ್ಯಾಯಾಲಯ ಮುಕ್ತಾಯಗೊಳಿಸಿದೆ.
ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರು ಜ್ಞಾಪನಾ ಪತ್ರ ಸಲ್ಲಿಸಿ, ಕೇಂದ್ರ ಸರ್ಕಾರ ಮತ್ತು ಮೆಸೆಸ್ ಡಿಕ್ಲೊಮಾ ಪ್ರೈವೇಟ್ ಲಿಮಿಡೆಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಬೇನಾಮಿ ರಸ್ತೆ ವಹಿವಾಟು ಕಾಯಿದೆ 1988ರ ಸೆಕ್ಷನ್ 3(2) ಅಸಾಂವಿಧಾನಿಕವಾಗಿದ್ದು, ಸಂವಿಧಾನದ ಪರಿಚ್ಛೇಧ 20(1)ಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿತ್ತು.
ಈ ಆದೇಶದಂತೆ ಆರೋಪಿತರ ವಿರುದ್ಧ ಬೇನಾಮಿ ವಹಿವಾಟು ಕಾಯಿದೆಯಲ್ಲಿ ಪ್ರಕರಣ ಮುಂದುವರೆಸಲು ಅವಕಾಶವಿಲ್ಲ ಎಂದು ವಕೀಲರು ತಮ್ಮ ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಿ ಪ್ರಕರಣ ಮುಕ್ತಾಯಗೊಳಿಸುವಂತೆ ಕೋರಿದ್ದರು.