ಕರ್ನಾಟಕ

karnataka

ನಿರ್ಗತಿಕರಲ್ಲಿ ತಾಯಿ ಪ್ರೀತಿ ಕಂಡ ದಂಪತಿ; ಸೀರೆ ಹಂಚಿ ಸಂಭ್ರಮ..‌

By

Published : May 10, 2020, 4:53 PM IST

ತಾಯಂದಿರ ಋಣ ತೀರಿಸಲು ಬೆಂಗಳೂರಿನ ನಿವಾಸಿ ಜಯರಾಜ್ ನಾಯ್ಡು ಮತ್ತು ಮಂಜಳಾ ಜಯರಾಜ್ ನಾಯ್ಡು ದಂಪತಿ ನಿರ್ಗತಿಕರಿಗೆ ಹಾಗೂ ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗೆ ಸೀರೆ ಹಂಚಿ ತಾಯಂದಿರ ದಿನಾಚರಣೆ ಆಚರಿಸಿದ್ದಾರೆ.

Mother's Day
ತಾಯಂದಿರ ದಿನಾಚರಣೆ

ಬೆಂಗಳೂರು : ನಮ್ಮೆಲ್ಲರ ಬದುಕಿನ ಜೀವಂತ ಪವಾಡ ಅಂದರೆ ಅದು ಎರಡಕ್ಷರದ ಅಮ್ಮ. ‌ಸಾಟಿಗೆ ಸಿಗದ ಅತೀವ ಪ್ರೀತಿ, ಕಾಳಜಿ ತೋರುವ ಅಮ್ಮಂದಿರಿಗೆ ಇಂದು ಅವರದ್ದೇ ದಿನ. ಇಂದು ವಿಶ್ವ ತಾಯಂದಿರ ದಿನ. ಎಲ್ಲವೂ ಸಹಜ ಸ್ಥಿತಿಯಲ್ಲಿ ಇದ್ದಿದ್ರೆ ಅದೆಷ್ಟೋ ಮಂದಿ ಸಂಭ್ರಮದ ದಿನವನ್ನಾಗಿ ಆಚರಿಸುತ್ತಿದರು. ಆದರೆ, ಕೊರೊನಾ ಕರಾಳ ದಿನದಿಂದಾಗಿ ಇಂದು ಎಲ್ಲ ಸಂತಸ ಮಂಕಾಗಿದೆ.

ಇದರ ನಡುವೆ ತಾಯಂದಿರ ಋಣ ತೀರಿಸಲು ಬೆಂಗಳೂರಿನ ನಿವಾಸಿ ಜಯರಾಜ್ ನಾಯ್ಡು ಮತ್ತು ಮಂಜಳಾ ಜಯರಾಜ್ ನಾಯ್ಡು ದಂಪತಿ ನಿರ್ಗತಿಕರಲ್ಲಿ ತಾಯಿ ಪ್ರೀತಿ ಕಂಡರು. ಇದಕ್ಕಾಗಿ ಇವರು ಮಾಡಿದ್ದು ನಿರ್ಗತಿಕರಿಗೆ ಹಾಗೂ ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗೆ ಸೀರೆ ಹಂಚಿ ಸಂಭ್ರಮಿಸಿದರು. ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಗೆ ಹೊಸ ಸೀರೆ ಖರೀದಿಸಿ, ನಗರದ ವಿವಿಧೆಡೆ ಹಂಚಿದರು. ಜೊತೆಗೆ ಹಸಿವಿನಿಂದ ಕಂಗಾಲಾಗಿದ್ದ ಬಡವರಿಗೆ, ನಿರ್ಗತಿಕರಿಗೆ ಹೊತ್ತಿನ ಊಟ ನೀಡಿದರು.

ನಿರ್ಗತಿಕರ ಜೊತೆ ತಾಯಂದಿರ ದಿನಾಚರಣೆ ಆಚರಿಸಿದ ದಂಪತಿ..

ನಗರದಲ್ಲಿ ಲಾಕ್‌ಡೌನ್ ಜಾರಿಯಾದಾಗಿನಿಂದಲ್ಲೂ ಹಸಿದವರಿಗೆ ನಿತ್ಯ ಮಧ್ಯಾಹ್ನದ ಊಟವನ್ನ ನೀಡುತ್ತಾ‌ ಬಂದಿದ್ದು ಸಮಾಜಮುಖಿ ಕೆಲಸದಲ್ಲಿ ಈ ದಂಪತಿ ತೊಡಗಿಕೊಂಡಿದ್ದಾರೆ. ಇಂದು ವಿಶ್ವ ತಾಯಂದಿರ ದಿನ ಇರುವ ಕಾರಣದಿಂದ ವಿಶೇಷವಾಗಿ ತಾಯಂದಿರಿಗೆ ಸೀರೆಯನ್ನ ನೀಡಿದ್ದೇವೆ. ಊಟದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸಾರ್ಥಕ ಜೀವನ ನಮ್ಮದಾಗಿಸಿಕೊಂಡಿದ್ದೇವೆ ಅಂತಾರೆ ಜಯರಾಜು ನಾಯ್ಡು..

ಅದೇನೇ ಇರಲಿ ಎಲ್ಲರಲ್ಲೂ ತಾಯ್ತನವನ್ನ ಕಾಣುವ ಅವರೊಟ್ಟಿಗೆ ತಾಯಂದಿರ ಆಚರಿಸುವುದು ನಿಜಕ್ಕೂ ಸಂತಸದ ವಿಷಯ.

ABOUT THE AUTHOR

...view details