ಬೆಂಗಳೂರು: ಚಾಲಕನೊಂದಿಗೆ ಸ್ನೇಹ ಬೆಳೆಸಿ ಕಾರು ದೋಚಿ ಪರಾರಿಯಾಗಿದ್ದ ದಂಪತಿಯನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೇದಾವತಿ ಹಾಗು ಮೇಕೆ ಮಂಜ ಬಂಧಿತರು.
ಈ ಹಿಂದೆ ಆರೋಪಿಗಳು ಓಲಾ ಕಾರೊಂದನ್ನು ಬುಕ್ ಮಾಡಿ ನಗರದಲ್ಲಿ ಸುತ್ತಾಡಿಸುವಂತೆ ಕಾರು ಚಾಲಕನಿಗೆ ಹೇಳಿ ಮುಂಗಡ ಹಣ ನೀಡಿ ತಾವು ಸಭ್ಯರೆಂಬಂತೆ ನಂಬಿಸಿ ಚಾಲಕನೊಂದಿಗೆ ಸ್ನೇಹ ಬೆಳಸಿದ್ದಾರೆ. ನಗರ ಸುತ್ತಿ ಬಂದ ನಂತರ ಪಾರ್ಟಿ ಮಾಡೋಣ ಎಂದು ಚಾಲಕನನ್ನು ಬಾರ್ವೊಂದಕ್ಕೆ ಕರೆದೊಯ್ದು ಕಂಠ ಪೂರ್ತಿ ಕುಡಿಸಿದ್ದಾರೆ. ಬಳಿಕ ನಶೆಯಲ್ಲಿದ್ದ ಚಾಲಕನ ಜೇಬಿನಿಂದ ಕಾರಿನ ಕೀ ತೆಗೆದುಕೊಂಡು ಕಾರಿನೊಂದಿಗೆ ದಂಪತಿ ಪರಾರಿಯಾಗಿದ್ದರು. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯುಲ್ಲಿ ಕಾರು ಚಾಲಕ ದೂರು ದಾಖಲಿಸಿದ್ದರು.