ಬೆಂಗಳೂರು:ಒಂದೆಡೆ ಮೈತ್ರಿ ಸರ್ಕಾರದ ವಿಶ್ವಾಸಮತ ಸಾಬೀತು ಸತ್ವಪರೀಕ್ಷೆ ನಡೆದಿರುವ ಸಂದರ್ಭದಲ್ಲಿ ವಿಧಾನಸೌಧದ ಒಳಗೆ ಜೋಡಿ ಕಾಗೆಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿದವು.
ವಿಧಾನಸೌಧದೊಳಗೆ ಸಾಯಂಕಾಲ ಕಂಡ ಜೋಡಿಕಾಗೆ, ನೀಡಿದ ಸೂಚನೆಯಾದರೂ ಏನು...? - kannadanews
ವಿಧಾನಸೌಧದೊಳಗೆ ಸಿಎಂ ಕುಮಾರಸ್ವಾಮಿ ಭಾಷಣ ಮಾಡುವ ವೇಳೆ ಜೋಡಿಕಾಗೆ ಕಾಣಿಸಿಕೊಂಡಿದ್ದು,ಅಪಶಕುನ ಎಂಬ ಮಾತು ಕೇಳಿ ಬಂದಿದೆ.
ವಿಧಾನಸಭೆ ಮೊಗಸಾಲೆ ಮುಂಭಾಗದ ಆವರಣದಲ್ಲಿ ಕುಳಿತು ಕೆಲಕಾಲ ಕೂಗಿ ಅತ್ತಿತ್ತ ಹಾರಾಡಿದ ಕಾಗೆಗಳು ಮೈತ್ರಿ ಸರ್ಕಾರಕ್ಕೆ ಅಪಶಕುನ ವೇನಾದರೂ ಎದುರಾಗಿದೆ ಎಂಬ ಸೂಚನೆಯನ್ನು ನೀಡಿದವಾ ಎಂದು ಭಾಸವಾಯಿತು.ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿಯೇ ಕಾಗೆಗಳು ಕಾಣಿಸಿಕೊಂಡಿದ್ದು ವಿಧಾನಸೌಧದ ಪಡಸಾಲೆಯಲ್ಲಿ ಹೊಸದೊಂದು ಚರ್ಚೆಗೆ ಗ್ರಾಸವಾಗುವಂತೆ ಮಾಡಿತು. ಒಟ್ಟಾರೆ ವಿಶ್ವಾಸಮತ ಸಾಬೀತು ಮಾಡಲು ಮತಕ್ಕೆ ಹಾಕುವ ಸಮಯ ಹತ್ತಿರವಾಗುತ್ತಿದ್ದ ಸಂದರ್ಭ ಅದರಲ್ಲಿಯೂ ಮಂಗಳವಾರ ಸಾಯಂಕಾಲದ ಹೊತ್ತಲ್ಲಿ ವಿಧಾನಸೌಧದೊಳಗೆ ಕಾಗೆ ಕಾಣಿಸಿಕೊಂಡಿದ್ದು ಒಂದು ರೀತಿ ಅಪಶಕುನ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಬಿದ್ದು ಹೋಗುವ ಅಂಚಿನಲ್ಲಿರುವಾಗಲೇ ಇಂಥದ್ದೊಂದು ದೃಶ್ಯ ಕಂಡಿರುವುದು ವಿಪರ್ಯಾಸ. ಅಲ್ಲದೆ ಅಪಾರವಾಗಿ ಆಸ್ತಿಕರಾಗಿರುವ ಸಿಎಂ ಕುಟುಂಬಕ್ಕೆ ಇದು ಅಪಶಕುನವಾಗಿ ಪರಿಣಮಿಸಿತಾ? ಅಥವಾ ಕೆಟ್ಟ ಘಟನೆ ಸಂಭವಿಸುವ ಮುನ್ಸೂಚನೆಯನ್ನು ನೀಡಿದ ಎಂಬುದಾಗಿ ಕೂಡ ಕೆಲವರು ಮಾತನಾಡಿಕೊಂಡಿದ್ದಾರೆ.