ಬೆಂಗಳೂರು:ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿದ್ದು, ರಣ ಬಿಸಲಿಗೆ ಜನ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆಯೂ ಲಾಕ್ಡೌನ್ನ ಕರ್ತವ್ಯನಿರತ ಪೊಲೀಸರಿಗೆ ದಂಪತಿ ಮಜ್ಜಿಗೆ ವಿತರಿಸಿದರು.
ಲಾಕ್ಡೌನ್ ವೇಳೆ ಅಳಿಲುಸೇವೆ... ಬಿಸಿಲಿನಲ್ಲಿ ಬಸವಳಿದ ಪೊಲೀಸರಿಗೆ ಮಜ್ಜಿಗೆ ವಿತರಣೆ - ಬೆಂಗಳೂರು ಕರ್ಫ್ಯೂ ಲೆಟೆಸ್ಟ್ ನ್ಯೂಸ್
ನಿರ್ಮಾಣ ಉದ್ಯಮದಲ್ಲಿ ತೊಡಗಿಕೊಂಡಿರುವ ಹಿತನ್ ಅಮರ್ ಹಾಗೂ ಅವರ ಪತ್ನಿ, ಕರ್ತವ್ಯನಿರತ ಪೊಲೀಸರಿಗೆ ತಂಪಾದ ಮಜ್ಜಿಗೆ ವಿತರಿಸಿದರು. ಮನೆಯಲ್ಲಿ ತಯಾರಿಸಿದ ಮಜ್ಜಿಗೆಯನ್ನು ತಮ್ಮ ಕಾರಿನ ಡಿಕ್ಕಿಯಲ್ಲಿ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ಇರಿಸಿ ಪೊಲೀಸ್ ಸಿಬ್ಬಂದಿಯಿದ್ದ ಸ್ಥಳಕ್ಕೆ ತೆರಳಿ ವಿತರಿಸಿದರು.

ನಿತ್ಯ ನಾಲ್ಕು ಗಂಟೆ ಈ ಕುಟುಂಬ ಮಜ್ಜಿಗೆ ವಿತರಿಸಿಕೊಂಡು ಬರುತ್ತಿದೆ. ಸದಾಶಿವ ನಗರದಿಂದ ಹೊರಡುವ ಕಾರು ಟ್ರಿನಿಟಿ ಸರ್ಕಲ್ವರೆಗೆ ದಾರಿಯುದ್ದಕ್ಕೂ ಸಿಗುವ ಪೊಲೀಸರಿಗೆ ಮಜ್ಜಿಗೆ ಹಾಗೂ ನೀರು ಹಂಚುತ್ತಾರೆ. ಪ್ರತಿ ದಿನ 700 ಕಪ್ ಮಜ್ಜಿಗೆಯನ್ನು ವಿತರಣೆ ಮಾಡುತ್ತಾ ಲಾಕ್ಡೌನ್ನಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.