ಕರ್ನಾಟಕ

karnataka

ETV Bharat / state

ಕಳ್ಳತನ ಮಾಡುತ್ತಿದ್ದ ಕಿಲಾಡಿ ದಂಪತಿ ಬಂಧನ: 1 ಕೋಟಿ 22 ಲಕ್ಷ ರೂ.ಗಳ ಚಿನ್ನಾಭರಣ ವಶ - married couple arrested for stealing cash

ಆರೋಪಿಗಳು 2015 ರಿಂದಲೂ ಇದೇ ರೀತಿಯ ಕೃತ್ಯದಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದು ಬಂದಿದ್ದು, ಇಲ್ಲಿಯವರೆಗೆ 26 ಪ್ರಕರಣಗಳು ಅವರ ಮೇಲೆ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಸಿಹೆಚ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

married couple arrested for stealing cash
ಕಿಲಾಡಿ ದಂಪತಿ

By

Published : May 21, 2022, 5:28 PM IST

Updated : May 21, 2022, 5:58 PM IST

ಬೆಂಗಳೂರು: ಕಳ್ಳತನ ಮಾಡುತ್ತಿದ್ದ ದಂಪತಿ ಬಂಧಿಸಿರುವ ಇಲ್ಲಿನ ತಲಘಟ್ಟಪುರ ಪೊಲೀಸರು ಅವರಿಂದ 1 ಕೋಟಿ 22 ಲಕ್ಷ ರೂ.ಗಳ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ರತ್ನಕುಮಾರ್ (40), ತಾಸಿನ್ ಫಾತಿಮಾ (36) ಬಂಧಿತ ದಂಪತಿ ಎಂದು ತಿಳಿದು ಬಂದಿದೆ.

ವ್ಯಕ್ತಿಯೊಬ್ಬರು ಬ್ಯಾಂಕ್ ಖಾತಿಯಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಬಿಡಿಸಿ ತಂದು ಕಾರಿನಲ್ಲಿಟ್ಟಿದ್ದರು. ಅನಂತರ ಕೆಲಸದ ನಿಮಿತ್ತ ನರ್ಸರಿಗೆ ಹೋಗಿ ಬರುವುದಾಗಿ ತೆರಳಿದ್ದರು. ಆದರೆ, ಅವರು ಹೋಗಿ ಬರುವಷ್ಟರಲ್ಲಿ ಆರೋಪಿ ದಂಪತಿ ಎಲ್ಲವನ್ನೂ ದೋಚಿ ಪರಾರಿಯಾಗಿದ್ದರು. ಕಾರಿನಲ್ಲಿ ಸುಮಾರು 1 ಕೆಜಿ 170ಗ್ರಾಂ ಚಿನ್ನಾಭರಣ ಹಾಗೂ 186 ಗ್ರಾಂ ವಜ್ರದ ಆಭರಣ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಅದರ ಆಧಾರದ ಮೇಲೆ ನಮ್ಮ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಈ ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸಿಹೆಚ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಸಿಹೆಚ್ ಪ್ರತಾಪ್ ರೆಡ್ಡಿ

ಹಕ್ಕುದಾರರಿಗೆ ಹಸ್ಥಾಂತರ:ಆರೋಪಿಗಳಿಂದ 47 ಲಕ್ಷ ರೂ. ಬೆಲೆ ಬಾಳುವ 978 ಗ್ರಾಂ ತೂಕದ ಚಿನ್ನಾದ ಒಡವೆಗಳು ಮತ್ತು 75 ಲಕ್ಷ ರೂ. ಗಳ 176 ಗ್ರಾಂ ವಜ್ರದ ಒಡವೆಗಳು ಸೇರಿ ಒಟ್ಟು 1 ಕೋಟಿ 22 ಲಕ್ಷ ವೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಅದರ ಹಕ್ಕುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಪ್ರತಾಪ್ ರೆಡ್ಡಿ ಹೇಳಿದ್ದಾರೆ.

2015 ರಿಂದ ಕಳ್ಳತನದಲ್ಲಿ ಸಕ್ರಿಯ:ಆರೋಪಿಗಳು 2015 ರಿಂದಲೂ ಇದೇ ರೀತಿಯ ಕೃತ್ಯದಲ್ಲಿ ಸಕ್ರೀಯರಾಗಿದ್ದರು ಎಂದು ತಿಳಿದು ಬಂದಿದ್ದು, ಇಲ್ಲಿಯವರೆಗೆ 26 ಪ್ರಕರಣಗಳು ಅವರ ಮೇಲೆ ದಾಖಲಾಗಿದೆ.

ಇದನ್ನು ಓದಿ:ವಿಧಿಯ ನರ್ತನ.. ಪಂಜಾಬ್​ನಲ್ಲಿ ಒಂದೇ ಕುಟುಂಬದ ಮೂವರು ಬಲಿ

Last Updated : May 21, 2022, 5:58 PM IST

ABOUT THE AUTHOR

...view details