ಬೆಂಗಳೂರು: ದೇಶದ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗ್ತಾನೆ ಇದೆ. ಈ ಪೈಕಿ ಆರ್ಥಿಕ ಅಪರಾಧಗಳು ಶೇ.8ರಷ್ಟು ಅಧಿಕವಾಗಿವೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
2017ರಲ್ಲಿ 29,064 ಪ್ರಕರಣಗಳು, 2018ರಲ್ಲಿ 31,501 ಕೇಸ್‌ಗಳು ದೇಶದಲ್ಲಿ ದಾಖಲಾಗಿವೆ. ಈ ಮೂಲಕ ಶೇ.8ರಷ್ಟು ಏರುಮುಖವಾಗಿರುವುದು ಆತಂಕಾರಿ. ಈ ಪೈಕಿ 26,401 ಆರೋಪಿಗಳನ್ನು ಬಂಧಿಸಲಾಗಿದೆ. ಕಾಲಬದಲಾದಂತೆ ಅಪರಾಧದ ಸ್ವರೂಪಗಳು ಬದಲಾಗ್ತಿತಿ. ನಂಬಿಕೆ ದ್ರೋಹ ಹಾಗೂ ವಂಚನೆ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ.1 ಲಕ್ಷದಿಂದ ಹಾಗೂ ಕೋಟಿ ಕೋಟಿ ರೂಪಾಯಿವರೆಗೂ ವಂಚನೆ ಪ್ರಕರಣಗಳ ಸಂಖ್ಯೆ ಅಧಿಕವಾಗಿವೆ.