ಬೆಂಗಳೂರು:ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಉಪಚುನಾವಣೆ ಮಹತ್ವ ಪಡೆದುಕೊಂಡಿದ್ದು, ಇಂದಿನ ಫಲಿತಾಂಶದ ಮೇಲೆ ಅನರ್ಹ ಶಾಸಕರು ಹಾಗೂ ಬಿಎಸ್ವೈ ಸರ್ಕಾರದ ಭವಿಷ್ಯ ನಿರ್ಧಾರಗೊಳ್ಳಲಿದೆ.
ಉಪಚುನಾವಣೆ ಫಲಿತಾಂಶ: ಮನೆಯಲ್ಲೇ ಕುಳಿತು ಟಿವಿ ವೀಕ್ಷಣೆ ಮಾಡುತ್ತಿರುವ ಸಿಎಂ ಬಿಎಸ್ವೈ - ಬಿಎಸ್ವೈ ಸರ್ಕಾರದ ಭವಿಷ್ಯ
ರಾಜ್ಯದಲ್ಲಿನ 15 ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಮತದಾನದ ಫಲಿತಾಂಶ ಇಂದು ಬಹಿರಂಗಗೊಳ್ಳುತ್ತಿದ್ದು, ಬಿಎಸ್ವೈ ಮನೆಯಲ್ಲೇ ಕುಳಿತು ರಿಸಲ್ಟ್ ವೀಕ್ಷಣೆ ಮಾಡುತ್ತಿದ್ದಾರೆ.
ಈಗಾಗಲೇ ಮತಎಣಿಕೆ ಆರಂಭಗೊಂಡಿರುವುದರಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಳಗ್ಗೆ ವಾಕಿಂಗ್ಗೂ ಹೋಗದೇ ಟಿವಿ ಮುಂದೆ ಕುಳಿತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಬಿಎಸ್ವೈ ಟಿವಿ ಮುಂದೆ ಕುಳಿತುಕೊಂಡಿದ್ದಾರೆ. ನಿತ್ಯ ಬೆಳಗ್ಗೆ ವಾಕಿಂಗ್ ಹೋಗಿ ವಾಪಸ್ ಆಗುತ್ತಿದ್ದ ಅವರು ಇಂದು ಫಲಿತಾಂಶ ಪ್ರಕಟಗೊಳ್ಳುತ್ತಿರುವ ಕಾರಣ ಎಲ್ಲಿಯೂ ಹೋಗದೆ ಮನೆಯಲ್ಲೇ ಕುಳಿತು ಫಲಿತಾಂಶದ ವೀಕ್ಷಣೆ ಮಾಡುತ್ತಿದ್ದಾರೆ.
ಪ್ರತಿದಿನ ದಿನ ಬೆಳಗ್ಗೆ ಎದ್ದು ವಾಕಿಂಗ್ ಮುಗಿಸಿ ವಾಪಸ್ ಆಗುತ್ತಿದ್ದರು. ಆದರೆ, ಇಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮತ ಎಣಿಕೆ ವರದಿಗಳನ್ನು ವೀಕ್ಷಿಸುತ್ತಿದ್ದು, ಈ ವೇಳೆ ಬಂದ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.