ಬೆಂಗಳೂರು: ವೀಸಾ ಗಡುವು ಮುಗಿದು ದೇಶದಲ್ಲಿ ನೆಲೆಯೂರಿದ್ದ ಕ್ಯಾಮರೋನ್ ದೇಶದ ಪ್ರಜೆಯೊಬ್ಬ 2 ಸಾವಿರ ಮುಖಬೆಲೆಯ ಅಸಲಿ ನೋಟನ್ನು ಕಲರ್ ಜೆರಾಕ್ಸ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.
ಖೋಟಾ ನೋಟು ದಂಧೆ.. ವಿದೇಶಿ ಪ್ರಜೆ ಬಂಧನ.. ₹33.70 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ.. - kannada ne3ws
2 ಸಾವಿರ ಮುಖಬೆಲೆಯ ಅಸಲಿ ನೋಟನ್ನು ಕಲರ್ ಜೆರಾಕ್ಸ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪದಡಿ ಕ್ಯಾಮರೋನ್ ದೇಶದ ಪ್ರಜೆ ಡಿಯೋಡ್ಯೂನ್ ಕ್ರಿಸ್ಟೋಲ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡಿಯೋಡ್ಯೂನ್ ಕ್ರಿಸ್ಟೋಲ್ ಬಂಧಿತ ಆರೋಪಿ. ಈತ ಬಾಣಸವಾಡಿ ಮುಖ್ಯರಸ್ತೆಯ ಸುಬ್ಬಯ್ಯನಪಾಳ್ಯದಲ್ಲಿ ವಾಸ ಮಾಡುತ್ತಿದ್ದು, 2017ರಲ್ಲಿ ಕ್ಯಾಮರೋನ್ ದೇಶದಿಂದ ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದಿದ್ದು, ಬಳಿಕ ವೀಸಾ ನವೀಕರಿಸದೆ ಅಕ್ರಮವಾಗಿ ನೆಲೆಯೂರಿದ್ದ. ದೇಶದಲ್ಲಿ ಚಲಾವಣೆಯಲ್ಲಿರುವ 2 ಸಾವಿರ ರೂ.ಮುಖಬೆಲೆಯ ನೋಟುಗಳನ್ನು ಕಲರ್ ಪ್ರಿಂಟರ್ ಮೂಲಕ ಯಥಾವತ್ತಾಗಿ ನಕಲಿಯಾಗಿ ಜೆರಾಕ್ಸ್ ಮಾಡಿ ಅವುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದಾನೆಂಬ ಮಾಹಿತಿಯನ್ನು ಸಿಸಿಬಿ ಸಂಗ್ರಹಿಸಿ, ಮಹಿಳೆ ಹಾಗೂ ಮಾದಕ ದ್ರವ್ಯ ದಳದ ಪೊಲೀಸ್ ಅಧಿಕಾರಿಗಳು ಕ್ರಿಸ್ಟೋಲ್ ಮನೆ ಮೇಲಿನ ದಾಳಿ ಆರೋಪಿಯನ್ನು ಬಂಧಿಸಿದ್ದಾರೆ.
ಈತನಿಂದ ದೇಶದ 2 ಸಾವಿರ ರೂ. ಬೆಲೆಯ ನೋಟುಗಳ ಕಲರ್ ಪ್ರಿಂಟ್ ಮಾಡಿಕೊಂಡು ಚಲಾವಣೆ ಮಾಡಲು ಇಟ್ಟುಕೊಂಡಿದ್ದ 33.70 ಲಕ್ಷ ರೂ.ಮೌಲ್ಯದ ಖೋಟಾನೋಟುಗಳು, ಎರಡು ಕೈನಾನ್ ಕಂಪನಿಯ ಕಲರ್ ಪ್ರಿಂಟರುಗಳು ಹಾಗೂ ಆರೋಪಿಯ ಪಾಸ್‍ಪೋರ್ಟ್‍ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.