ಬೆಂಗಳೂರು :ರಾಗಿಣಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಿಂದ ಇಂದು ಸಂಜೆ ಪರಪ್ಪನ ಅಗ್ರಹಾರಕ್ಕೆ ನಟಿ ಬರುವ ನಿರೀಕ್ಷೆಯಿದೆ.
ರಾಗಿಣಿಯ ಜಾಮೀನು ಸಮೇತ ಬಿಡುಗಡೆ ಪತ್ರವನ್ನು ಜೈಲಿನ ಅಧಿಕಾರಿಗಳಿಗೆ ನೀಡಿದ ನಂತರ ಮೂರ್ನಾಲ್ಕು ಗಂಟೆಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ಅನಂತರವಷ್ಟೇ ರಾಗಿಣಿ ಅಧೀಕೃತವಾಗಿ ಬಿಡುಗಡೆಗೊಳ್ಳಲಿದ್ದಾರೆ. ಇದರಿಂದ 144 ದಿನಗಳ ಬಳಿಕ ರಾಗಿಣಿಯ ಜೈಲು ವಾಸ ಅಂತ್ಯವಾಗಲಿದೆ.