ಕರ್ನಾಟಕ

karnataka

ETV Bharat / state

ಲಿಂಗಾಯತರಿಗೆ ಸಿಎಂ ಸ್ಥಾನ ನೀಡಲು ಹೆಚ್ಚಿದ ಒತ್ತಡ: ಬೊಮ್ಮಾಯಿ ಮೇಲೆ ಬಿಎಸ್‌ವೈ ಒಲವು, ಬೆಲ್ಲದ್‌ಗೆ RSS ಬೆಂಬಲ

ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ನಾಡಿನ ಜನರಲ್ಲಿ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಸಿಎಂ ಪಟ್ಟಕ್ಕೆ ಹೊಸ ಹೊಸ ಹೆಸರುಗಳು ಕೇಳಿಬರುತ್ತಿದೆ.

countdown-for-bjp-legislative-party-meeting
ಲಿಂಗಾಯತರಿಗೆ ಸಿಎಂ ಸ್ಥಾನ ನೀಡಲು ಹೆಚ್ಚಿದ ಒತ್ತಡ: ಬೊಮ್ಮಾಯಿ ಮೇಲೆ ಬಿಎಸ್‌ವೈ ಒಲವು, ಬೆಲ್ಲದ್‌ಗೆ RSS ಬೆಂಬಲ

By

Published : Jul 27, 2021, 6:28 PM IST

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಯಾರಾಗಲಿದ್ದಾರೆ ಹೊಸ ನಾಯಕ ಎನ್ನುವ ಕುತೂಹಲ ಹೆಚ್ಚಿದೆ. 10 ಕ್ಕೂ ಹೆಚ್ಚು ಹೆಸರುಗಳು ಸಿಎಂ ರೇಸ್‌ನಲ್ಲಿದ್ದರೂ ಟಾಪ್ ಫೈವ್ ನಲ್ಲಿ ಬಿ.ಎಲ್ ಸಂತೋಷ್, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ್, ಪ್ರಹ್ಲಾದ್ ಜೋಷಿ ಹಾಗು ಕಾಗೇರಿ ಹೆಸರುಗಳು ಚಾಲ್ತಿಯಲ್ಲಿವೆ.

ಕ್ಷಣಕ್ಷಣಕ್ಕೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಹೆಸರುಗಳ ಪಟ್ಟಿಯಲ್ಲಿ ಬದಲಾವಣೆ ಆಗುತ್ತಿದೆ. ಯಡಿಯೂರಪ್ಪ ರಾಜೀನಾಮೆ ಕೊಡುವ ಮೊದಲಿದ್ದ ಹೆಸರುಗಳಿಗೂ ಇಂದು ಇರುವ ಹೆಸರುಗಳಲ್ಲೂ ಸಾಕಷ್ಟು ಬದಲಾವಣೆ ಆಗಿದೆ ಎಂದು ತಿಳಿದುಬಂದಿದೆ.

ಇಷ್ಟು ದಿನ ಮುನ್ನೆಲೆಯಲ್ಲಿ ಇಲ್ಲದ ಬೊಮ್ಮಾಯಿ ಹೆಸರು ಇಂದು ಏಕಾಏಕಿ ಮುನ್ನೆಲೆಗೆ ಬಂದಿದೆ. ಯಡಿಯೂರಪ್ಪ ಅವರೇ ಖುದ್ದಾಗಿ ಬೊಮ್ಮಾಯಿ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಯುವ ಮುಖ ಹಾಗೂ ಆರ್.ಎಸ್.ಎಸ್ ಬೆಂಬಲಿತ ಶಾಸಕ ಅರವಿಂದ ಬೆಲ್ಲದ್ ಹೆಸರೂ ಇದೆ.

ಇದನ್ನೂ ಓದಿ: ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ: ಕೆ.ಎಸ್​. ಈಶ್ವರಪ್ಪ

ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಬೇಕು ಎನ್ನುವುದಾದರೆ ಈ ಇಬ್ಬರ ಹೆಸರಿನಲ್ಲಿ ಒಬ್ಬರಿಗೆ ಸಿಎಂ ಆಗುವ ಅವಕಾಶ ಖಚಿತ ಎನ್ನಲಾಗಿದೆ. ಬ್ರಾಹ್ಮಣ ಸಮುದಾಯಕ್ಕೆ ನೀಡುವುದಾದಲ್ಲಿ ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಷಿ, ಸ್ಪೀಕರ್ ಕಾಗೇರಿ ಹೆಸರು ಚಾಲ್ತಿಯಲ್ಲಿವೆ. ಆದರೆ ಯಾರಿಗೆ ಅವಕಾಶ ಎನ್ನುವುದು ಮಾತ್ರ ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.

ಈ ನಡುವೆ ನಿರಾಣಿ ಸಿಎಂ ಆಕಾಂಕ್ಷಿಯಾದರೂ ತಿರಸ್ಕರಿಸುತ್ತಲೇ ಪರೋಕ್ಷ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ಕೂಡ ನೇರವಾಗಿ ಸಿಎಂ ಸ್ಥಾನದ ಬಯಕೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಸ್ಪಷ್ಟವಾಗಬೇಕಿದೆ. ಎಲ್ಲರ ಚಿತ್ತ ಇದೀಗ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯತ್ತ ನೆಟ್ಟಿದೆ.

ಸಿಎಂ ಭೇಟಿ ಮಾಡಿದ ಮುಖಂಡರು:

ಯಡಿಯೂರಪ್ಪ ನಿವಾಸಕ್ಕೆ ಶಾಸಕರಾದ ಮಸಾಲೆ ಜಯರಾಮ್, ಬೆಳ್ಳಿ ಪ್ರಕಾಶ್, ಜ್ಯೋತಿ ಗಣೇಶ್, ವಿ ಸೋಮಣ್ಣ ಆಗಮಿಸಿ ಸಿಎಂ ಜೊತೆ ಸಭೆಗೂ ಮುನ್ನ ಚರ್ಚೆ ನಡೆಸಿದ್ದಾರೆ. ಇನ್ನು ಗೃಹ ಸಚಿವ ಬೊಮ್ಮಾಯಿ ಭೇಟಿ ಸಾಧ್ಯತೆ ಇದೆ.

ABOUT THE AUTHOR

...view details