ಬೆಂಗಳೂರು: ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ನೇಮಕಕ್ಕೆ ಪೂರಕವಾಗಿ ವಿಧಾನ ಪರಿಷತ್ ಕಲಾಪವನ್ನು 2 ದಿನಗಳ ಕಾಲ ಮುಂದೂಡಿಕೆ ಮಾಡಲು ಚಿಂತನೆ ನಡೆಸಿದ್ದು, ಈ ಸಂಬಂಧ ನಾಳೆ ಸದನ ಕಾರ್ಯಕಲಾಪ ಸಮಿತಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಸಭಾಪತಿ ಸ್ಥಾನಕ್ಕೆ ಇಂದು ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಕೊಟ್ಟಲ್ಲಿ, ನಾಳೆ ಉಪ ಸಭಾಪತಿ ಪ್ರಾಣೇಶ್ ನೇತೃತ್ವದಲ್ಲಿ ಕಲಾಪ ನಡೆಸಲಾಗುತ್ತದೆ. ಸಭಾಪತಿ ಸ್ಥಾನ ಖಾಲಿಯಾಗಿರುವ ಮಾಹಿತಿ ಪ್ರಕಟಿಸಲಾಗುತ್ತದೆ. ಸದನ ಕಾರ್ಯಕಲಾಪ ಸಮಿತಿ ಸಭೆಯನ್ನು ನಡೆಸಿ ಪರಿಷತ್ ಕಲಾಪವನ್ನು ಮತ್ತೆರಡು ದಿನಗಳ ಕಾಲ ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ನಾಳೆಯೇ ಸಚಿವ ಸಂಪುಟ ಸಭೆ ನಡೆಸಿ ರಾಜಭವನಕ್ಕೆ ಮಾಹಿತಿ ಕಳಿಸಲಿದ್ದು, ಸಭಾಪತಿ ಚುನಾವಣೆ ನಡೆಸಲು ಪ್ರಸ್ತಾವನೆ ಕಳಿಸಿಕೊಡಲಾಗುತ್ತದೆ. ರಾಜ್ಯಪಾಲರು ಅನುಮತಿ ನೀಡಿದ ನಂತರ ವಿಧಾನ ಪರಿಷತ್ ಕಾರ್ಯದರ್ಶಿಗಳು ಚುನಾವಣೆಗೆ ಅಧಿಸೂಚನೆ ಪ್ರಕಟಿಸಲಿದ್ದಾರೆ.
ಓದಿ:ಜಲ ಮಂಡಳಿಯಲ್ಲಿ ಸಿವಿಲ್ ಮುಖ್ಯ ಇಂಜಿನಿಯರ್ಗಳ ನೇಮಕಕ್ಕೆ ಕ್ರಮ: ಬಸವರಾಜ ಬೊಮ್ಮಾಯಿ
ಸಭಾಪತಿ ರಾಜೀನಾಮೆ ನೀಡಿದರೆ ಕಲಾಪ ಎರಡು ದಿನ ವಿಸ್ತರಣೆ; ಗೋಹತ್ಯೆ ನಿಷೇಧ ಕಾಯ್ದೆಯೂ ಮಂಡನೆ? - ಉಪ ಸಭಾಪತಿ ಪ್ರಾಣೇಶ್
ಸಭಾಪತಿ ಸ್ಥಾನಕ್ಕೆ ಇಂದು ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಕೊಟ್ಟಲ್ಲಿ, ನಾಳೆ ಉಪ ಸಭಾಪತಿ ಪ್ರಾಣೇಶ್ ನೇತೃತ್ವದಲ್ಲಿ ಕಲಾಪ ನಡೆಸಲಾಗುತ್ತದೆ. ಸಭಾಪತಿ ಸ್ಥಾನ ಖಾಲಿಯಾಗಿರುವ ಮಾಹಿತಿ ಪ್ರಕಟಿಸಲಾಗುತ್ತದೆ. ಸದನ ಕಾರ್ಯಕಲಾಪ ಸಮಿತಿ ಸಭೆಯನ್ನು ನಡೆಸಿ ಪರಿಷತ್ ಕಲಾಪವನ್ನು ಮತ್ತೆರಡು ದಿನಗಳ ಕಾಲ ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್
ಸೋಮವಾರ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಮಂಗಳವಾರ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಉಪ ಸಭಾಪತಿ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯದೇ ಇದ್ದರೂ, ಸಭಾಪತಿ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ.
ನಾಳೆ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ: ಇಂದು ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರಶೆಟ್ಟಿ ರಾಜೀನಾಮೆ ನೀಡಿದಲ್ಲಿ ನಾಳೆ ಉಪ ಸಭಾಪತಿ ಪ್ರಾಣೇಶ್ ಕಲಾಪ ನಡೆಸಲಿದ್ದು, ನಾಳಿನ ಕಲಾಪದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆಯಾಗಲಿದೆ ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.