ಕರ್ನಾಟಕ

karnataka

ETV Bharat / state

ಸಿ.ಟಿ.ರವಿ ಹೈಕೋರ್ಟ್ ನ್ಯಾಯಮೂರ್ತಿಗಳ ಪಾದದ ಧೂಳಿಗೂ ಸಮಾನವಿಲ್ಲ: ಪರಿಷತ್ ಸದಸ್ಯ ಎಸ್.ರವಿ - ಸಿ.ಟಿ.ರವಿ ವಿರುದ್ಧ ಪರಿಷತ್ ಸದಸ್ಯ ಎಸ್.ರವಿ ಆಕ್ರೋಶ

ಸಿ.ಟಿ.ರವಿ ಹೈಕೋರ್ಟ್ ನ್ಯಾಯಮೂರ್ತಿಗಳ ಪಾದದ ಧೂಳಿಗೂ ಸಮಾನವಲ್ಲ. ಕೋಮು ಮತ್ತು ವಿಷ ಬೀಜ ಬಿತ್ತುವುದು ಅವನ ಕೆಲಸ. ಅವನು ಜಡ್ಜ್​ಗಳ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಕಿಡಿಕಾರಿದರು.

ಪರಿಷತ್ ಸದಸ್ಯ ಎಸ್.ರವಿ
ಪರಿಷತ್ ಸದಸ್ಯ ಎಸ್.ರವಿ

By

Published : May 15, 2021, 2:38 PM IST

ಬೆಂಗಳೂರು: ನ್ಯಾಯಮೂರ್ತಿಗಳು ಸರ್ವಜ್ಞನರಲ್ಲ ಎಂಬ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸಿ.ಟಿ.ರವಿ ಹೈಕೋರ್ಟ್ ನ್ಯಾಯಮೂರ್ತಿಗಳ ಪಾದದ ಧೂಳಿಗೂ ಸಮಾನವಲ್ಲ ಎಂದು ಕಿಡಿಕಾರಿದರು.

ರಾಜ್ಯ ಕಷ್ಟದಲ್ಲಿರುವ ಸಂದರ್ಭದಲ್ಲಿ ರವಿ ಇಲ್ಲಸಲ್ಲದ ಹೇಳಿಕೆ ನಿಡುತ್ತಿದ್ದಾನೆ. ಕೋಮು ಮತ್ತು ವಿಷ ಬೀಜ ಬಿತ್ತುವುದು ಅವನ ಕೆಲಸ. ಅವನು ಜಡ್ಜ್​ಗಳ ಬಗ್ಗೆ ಮಾತನಾಡುತ್ತಿದ್ದಾನೆ.

ಪರಿಷತ್ ಸದಸ್ಯ ಎಸ್.ರವಿ
ಜಡ್ಜ್​ಗಳು ಮನುಷ್ಯರು, ಸಾವು ನೋವು ನೋಡುತ್ತಿದ್ದಾರೆ. ಹೀಗಾಗಿ ಎಸಿ ರೂಮ್​ನಲ್ಲಿ ಕೂರದೆ ಜನರ ಬಗ್ಗೆ ಮಾತನಾಡಿದ್ದಾರೆ. ಜನರ ಬಗ್ಗೆ ಕಾಳಜಿ ಇದ್ದಕ್ಕೆ ಜಡ್ಜ್​ಗಳು ಮಾತನಾಡಿದ್ದಾರೆ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

ಕೆಪಿಸಿಸಿ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಗುಡುಗಿದ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮೋದಿ ಲಸಿಕೆ ಇಲ್ಲದೇ ಉತ್ಸವ ಮಾಡುತ್ತಿದ್ದಾರೆ. ಅದನ್ನೇ ಕೋರ್ಟ್ ಪ್ರಶ್ನೆ ಮಾಡಿದೆ. ಕೇಳಿದ್ರೆ ನೇಣು ಹಾಕಿಕೊಳ್ಳಬೇಕಾ ಅಂತಾರೆ. ಅಮೆರಿಕದಲ್ಲಿ ಈಗಾಗಲೇ ಬಹುತೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಆದ್ರೆ ನಮ್ಮ ದೇಶದಲ್ಲಿ ಸುಮ್ಮನಿದ್ದು ಈಗ ಉತ್ಸವ ಮಾಡುತ್ತಿದ್ದಾರೆ. ಮೋದಿ ಓದಿದ ಕಾಲೇಜಿನಲ್ಲಿ ರವಿ ಓದಿದ್ದಾರೆ. ಹಾಗಾಗಿ ಜ್ಞಾನಿಯಂತೆ ಮಾತನಾಡುತ್ತಿದ್ದಾರೆ. ಜಡ್ಜ್​ಗಳು ಸರ್ವಜ್ಞ ಅಲ್ಲ ಅನ್ನುತ್ತಿದ್ದಾರೆ ಎಂದು ಸಿಟಿ ರವಿ ಹಾಗೂ ಸದಾನಂದ ಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details