ಕರ್ನಾಟಕ

karnataka

ETV Bharat / state

ಸಭಾಪತಿ ಹೊರಟ್ಟಿಗೆ ಇನ್ನೂ ಸಿಗದ ಸರ್ಕಾರಿ ಗೃಹ: ಸಿಎಂಗೆ ಎರಡು ಬಾರಿ ಪತ್ರ - ನಿವಾಸ ಕೋರಿ ಬಸವರಾಜ ಹೊರಟ್ಟಿ ಸಿಎಂಗೆ ಪತ್ರ

ಈ ಹಿಂದಿನ ಸಭಾಪತಿಗಳಿದ್ದ ಕುಮಾರಕೃಪ ಅತಿಥಿ ಗೃಹದ ಬಳಿಯ ಸರ್ಕಾರಿ ನಿವಾಸ ಸಚಿವ ಸಿ.ಪಿ.ಯೋಗೇಶ್ವರ್​ಗೆ ಹಂಚಿಕೆಯಾಗಿದ್ದು, ಆ ನಿವಾಸವನ್ನು ನೀಡುವಂತೆ ಕೋರಿ ಬಸವರಾಜ್ ಹೊರಟ್ಟಿ ಪತ್ರ ಬರೆದಿದ್ದಾರೆ.

Council chairman does not get Govt Residence
ನಿವಾಸ ಕೋರಿ ಎರಡು ಬಾರಿ ಸಿಎಂಗೆ ಪತ್ರ

By

Published : Feb 23, 2021, 3:03 PM IST

ಬೆಂಗಳೂರು:ವಿಧಾನ ಪರಿಷತ್​ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡು ಎರಡು ವಾರ ಕಳೆದರೂ ಬಸವರಾಜ್ ಹೊರಟ್ಟಿಗೆ ಅವರಿಗೆ ಇನ್ನೂ ಸರ್ಕಾರಿ ನಿವಾಸ ಸಿಕ್ಕಿಲ್ಲ. ಸರ್ಕಾರಿ ನಿವಾಸ ನೀಡುವಂತೆ ಕೋರಿ ಹೊರಟ್ಟಿ ಎರಡು ಬಾರಿ ಸಿಎಂ ಬಿಎಸ್​ವೈಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಹಿಂದಿನ ಸಭಾಪತಿಗಳಿದ್ದ ಕುಮಾರಕೃಪ ಅತಿಥಿ ಗೃಹದ ಬಳಿಯ ಸರ್ಕಾರಿ ನಿವಾಸ ಸಚಿವ ಸಿ.ಪಿ.ಯೋಗೇಶ್ವರ್​ಗೆ ಹಂಚಿಕೆಯಾಗಿದ್ದು, ಆ ನಿವಾಸವನ್ನು ನೀಡುವಂತೆ ಕೋರಿ ಹೊರಟ್ಟಿ ಪತ್ರ ಬರೆದಿದ್ದಾರೆ. ಶಿವಾನಂದ ವೃತ್ತದ ಗಾಂಧಿ ಭವನ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಈ ಹಿಂದೆ ಪ್ರತಾಪ್ ಚಂದ್ರ ಶೆಟ್ಟಿ ಇದ್ದರು. ಅದೇ ನಿವಾಸವನ್ನು ತನಗೆ ಹಂಚಿಕೆ ಮಾಡುವಂತೆ ಕೋರಿಕೊಂಡಿದ್ದಾರೆ.

ಬಸವರಾಜ್ ಹೊರಟ್ಟಿ ಸಿಎಂಗೆ ಬರೆದ ಪತ್ರ

ಓದಿ : ನನಗೆ ಯಾವ ಬುಲಾವೂ​ ಬಂದಿಲ್ಲ, ಬೇರೆ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ: ಯತ್ನಾಳ್​ ಸ್ಪಷ್ಟನೆ

ಫೆ. 9ರಂದು ನಾನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾಗಿರುತ್ತೇನೆ. ಬೆಂಗಳೂರು ನಗರದ ಕುಮಾರಕೃಪ ದಕ್ಷಿಣ ಲೋಕೋಪಯೋಗಿ ವಸತಿ ಗೃಹ ಸಂಖ್ಯೆ 03ರಲ್ಲಿ ವೀರಣ್ಣ ಮತ್ತೀಕಟ್ಟಿ, ಡಿ.ಹೆಚ್.ಶಂಕರಮೂರ್ತಿ ತದನಂತರ ಕೆ.ಪ್ರತಾಪ ಚಂದ್ರ ಶೆಟ್ಟಿ ಸಭಾಪತಿಗಳಾಗಿದ್ದ ಅವಧಿಯಲ್ಲಿ ವಾಸ್ತವ್ಯವಿದ್ದರು. ಸದರಿ ವಸತಿ ಗೃಹದಲ್ಲಿ ವಿಧಾನ ಪರಿಷತ್ತಿನ ಸಭಾಪತಿಗಳು ವಾಸ್ತವ್ಯ ಇದ್ದುದರಿಂದ, ಸದರಿ ಲೋಕೋಪಯೋಗಿ ವಸತಿ ಗೃಹ ಸಂಖ್ಯೆ 3, ಕುಮಾರಕೃಪ ದಕ್ಷಿಣವನ್ನು ನನ್ನ ವಾಸ್ತವ್ಯಕ್ಕೆ ಹಂಚಿಕೆ ಮಾಡಲು ಸಂಬಂಧಪಟ್ಟವರಿಗೆ ಆದೇಶಿಸಬೇಕೆಂದು ಸಭಾಪತಿ ಹೊರಟ್ಟಿ ಸಿಎಂಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ:ಸಭಾಪತಿಯಾದ ಬಸವರಾಜ್ ಹೊರಟ್ಟಿ ಜೆಡಿಎಸ್​​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ಕಾರಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ ಎಂದು ಹೊರಟ್ಟಿ ತಿಳಿಸಿದ್ದಾರೆ.

ABOUT THE AUTHOR

...view details