ಕರ್ನಾಟಕ

karnataka

ETV Bharat / state

ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ: ಕಾಸ್ಟ್ಯುಮ್ ಡಿಸೈನರ್ ರಮೇಶ್ ದಂಬೆಲ್ ವಿಚಾರಣೆ - Sushant singh rajaput case

ಕಳೆದ ಆರು ಗಂಟೆಗಳಿಂದ ಸಿಸಿಬಿ ಪೊಲೀಸರು ಕಾಸ್ಟ್ಯುಮ್ ಡಿಸೈನರ್ ರಮೇಶ್ ದಂಬೆಲ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಸುಶಾಂತ್ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದ್ದು, ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ರಮೇಶ್ ವಿಚಾರಣೆ ನಡೆಸುತ್ತಿದ್ದಾರೆ.

Costume Designer Ramesh Dambel inquiry by CCB
ಕಾಸ್ಟ್ಯುಮ್ ಡಿಸೈನರ್ ರಮೇಶ್ ದಂಬೆಲ್ ವಿಚಾರಣೆ

By

Published : Sep 26, 2020, 4:02 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರು ಗಂಟೆಗಳಿಂದ ಸಿಸಿಬಿ ಪೊಲೀಸರು ಕಾಸ್ಟ್ಯುಮ್ ಡಿಸೈನರ್ ರಮೇಶ್ ದಂಬೆಲ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ರಮೇಶ್​ಗೆ ಬಾಲಿವುಡ್ ಸ್ಟಾರ್ ನಟರೊಂದಿಗೆ ಲಿಂಕ್ ಇರುವುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮೃತಪಟ್ಟಿರುವ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆಗೂ ರಮೇಶ್ ಲಿಂಕ್​ ಇದ್ದು, ಈತ ಸುಶಾಂತ್ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ರಮೇಶ್ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details