ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ: ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ಆರೋಪ - ಮಾಜಿ ಡಿಸಿಎಂ ಡಾ ಅಶ್ವತ್ಥನಾರಾಯಣ

''ಪ್ರತ್ಯೇಕವಾಗಿ ಒಬ್ಬ ವ್ಯಕ್ತಿ ಅಂತ ಅಲ್ಲ, ಎಲ್ಲರೂ ವರ್ಗಾವಣೆ ದಂಧೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ'' ಎಂದು ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಗಂಭೀರ ಆರೋಪ ಮಾಡಿದರು.

Dr. Ashwatthanarayan
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ: ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ಆರೋಪ..

By

Published : Aug 5, 2023, 7:26 PM IST

ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದರು.

ಬೆಂಗಳೂರು: ''ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರದ ಮೂಲಕ ಮುಖ್ಯಮಂತ್ರಿಗಳು, ಸಚಿವರು ಎಲ್ಲಾ ಭಾಗ್ಯಗಳನ್ನು ಜಾರಿಗೊಳಿಸಿದ್ದಾರೆ'' ಎಂದು ಮಾಜಿ ಡಿಸಿಎಂ ಡಾ. ಸಿ. ಎನ್. ಅಶ್ವತ್ಥನಾರಾಯಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ವೈಎಸ್‌ಟಿ, ಎಸ್‌ಎಸ್‌ಟಿ ಅಂತ ಅಲ್ಲ. ಎಲ್ಲರೂ ವರ್ಗಾವಣೆ ದಂಧೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪ್ರತ್ಯೇಕವಾಗಿ ಒಬ್ಬ ವ್ಯಕ್ತಿ ಅಂತ ಅಲ್ಲ, ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ'' ಎಂದು ದೂರಿದರು.

ಸರ್ಕಾರದಿಂದಲೇ ಕಾನೂನು ಉಲ್ಲಂಘನೆ- ಆರೋಪ:''ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಇರುವುದೇ ಮುಖ್ಯಮಂತ್ರಿಗಳು, ಸಚಿವರು ಹಸ್ತಕ್ಷೇಪ ಮಾಡಬಾರದೆಂದು. ಒಂದು ಸಲ ಈ ಬೋರ್ಡ್ ನಲ್ಲಿ ನಿರ್ಧರಿಸಿ ವರ್ಗಾವಣೆ ಮಾಡಿದರೆ, ತಡೆ ಹಿಡಿಯಲು ಅವಕಾಶ ಇಲ್ಲ. ಆದರೆ, ಈ ಸರ್ಕಾರ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್​ನಲ್ಲಿ ಕಾನೂನು ಮೀರಿ ಹಸ್ತಕ್ಷೇಪ ಮಾಡಿದೆ. ಆಗಿರುವ ವರ್ಗಾವಣೆಗಳನ್ನು ತಡೆ ಹಿಡಿದಿದೆ, ಇದು ಕಾನೂನು ಉಲ್ಲಂಘನೆಯಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್​ಗಳ ವರ್ಗಾವಣೆ ತಡೆ ಹಿಡಿದು ಭಂಡತನ ತೋರುತ್ತಿರುವ ಸರ್ಕಾರದಿಂದಲೇ ಕಾನೂನು ಉಲ್ಲಂಘನೆ ಆಗುತ್ತಿದೆ'' ಎಂದು ಆರೋಪಿಸಿದರು.

ಗೃಹ ಇಲಾಖೆಯಲ್ಲಿ ವೈಎಸ್​ಟಿ ಹಸ್ತಕ್ಷೇಪದ ಬಗ್ಗೆ ಹೆಚ್​ಡಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಇರಬಾರದೆಂದು ಸುಪ್ರೀಂ ಕೋರ್ಟ್​ನಲ್ಲಿ ಆದೇಶವಿದೆ. ಪೊಲೀಸ್ ಬೋರ್ಡ್ ಸ್ಥಾಪನೆಯಾದ ಮೇಲೆ ಸರ್ಕಾರ ಹಸ್ತಕ್ಷೇಪ ಮಾಡಬಾರದು ಅಂತಾ ಇದೆ. ಆದರೆ, ಎಲ್ಲಾ ಕಾನೂನು ‌ಗಾಳಿಗೆ‌ ತೂರಲಾಗಿದೆ. ಯಾರಾದರೂ ಏನಾದರೂ ಹೇಳ್ಕೊಳ್ಳಿ,‌ ಮಾಡ್ಕೊಳ್ಳಿ‌, ನಾವು ಇರುವುದೇ ಹೀಗೆ ಅಂತಾರೆ. ಇವರಿಂದ ನ್ಯಾಯ ಪಡೆಯೋದು ಕಷ್ಟ.‌ ಇದನ್ನು ಸಂಪೂರ್ಣವಾಗಿ‌ ಖಂಡಿಸುತ್ತೇನೆ. ಕಾನೂನು ಸುವ್ಯವಸ್ಥೆ ಕುಸಿದಿದೆ'' ಎಂದು ಕಿಡಿಕಾರಿದರು.

ಜೆಡಿಎಸ್,‌ ಬಿಜೆಪಿಯ ಮುಂದಿನ ಹೋರಾಟ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಅಶ್ವತ್ಥನಾರಾಯಣ, ''ಜೆಡಿಎಸ್, ಬಿಜೆಪಿ ಪ್ರತಿಪಕ್ಷಗಳು ಜನರ ಧ್ವನಿಯಾಗಿವೆ. ಜೆಡಿಎಸ್‌ ಕೂಡ ಪ್ರತಿಪಕ್ಷವಾಗಿದೆ. ಅವರೂ ಕರ್ತವ್ಯ ಪಾಲನೆ ಮಾಡ್ತಿದ್ದಾರೆ. ನಮಗೆ ಬಹಳ ದೊಡ್ಡ ಬಹುಮತ ಇದೆ. ನಾವು ಸರ್ಕಾರದ ಕಿವಿ‌ಹಿಂಡುವ ಕೆಲಸ ಮಾಡುತ್ತೇವೆ'' ಎಂದು ಹೇಳಿದರು.

ಜೆಡಿಎಸ್ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ:ಜೆಡಿಎಸ್ ಜೊತೆ ದೋಸ್ತಿ ಬಗ್ಗೆ ಹೇಳಿದ ಅಶ್ವತ್ಥನಾರಾಯಣ ಅವರು, ಈ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಪ್ರತಿಪಕ್ಷಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವೂ ಧ್ವನಿ ಎತ್ತಿದ್ದೇವೆ, ಜೆಡಿಎಸ್‌ನವರು ಧ್ವನಿ ಎತ್ತಿದ್ದಾರೆ. ಈ ಸರ್ಕಾರಕ್ಕೆ ಅಂಕುಶ ಹಾಕುವ ಕೆಲಸ ಮಾಡುತ್ತಿದ್ದೇವೆ. ಆದರೆ, ನಾವು ಜೆಡಿಎಸ್ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ನೈಸ್ ಹಗರಣದ ದಾಖಲೆಗಳನ್ನು ಪ್ರಧಾನಿ ಮೋದಿಗೆ ಕೊಡುತ್ತೇನೆ, ಪೆನ್ ಡ್ರೈವ್ ಬಿಡುಗಡೆ ಮಾಡಿದ್ರೆ ತನಿಖೆ ಮಾಡುವ ತಾಕತ್ತು ಸರ್ಕಾರಕ್ಕೆ ಇದೆಯಾ? ಕುಮಾರಸ್ವಾಮಿ ಸವಾಲು

ABOUT THE AUTHOR

...view details