ಬೆಂಗಳೂರು: ಬಿಬಿಎಂಪಿಯ ಕೆಲ ಇಂದಿರಾ ಕ್ಯಾಂಟೀನ್ನಲ್ಲಿ ಬಡ ಕೂಲಿ ಕಾರ್ಮಿಕರಿಗಾಗಿ ಉಚಿತವಾಗಿ ಆಹಾರ ಕೊಡ್ತಿದೆ. ಸಾರ್ವಜನಿಕರು, ಬಡವರು ಹೆಚ್ಚಿರುವ ಆಯ್ದ ಸ್ಥಳಗಳಲ್ಲಿ ಮಾತ್ರ ಆಹಾರ ನೀಡಲಾಗುತ್ತಿದೆ. ಆದ್ರೆ ,ಪಾಲಿಕೆ ಸದಸ್ಯರು ಕೊರೊನಾ ಸಂಕಷ್ಟದಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ.
ಈ ಬಗ್ಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಮಾಹಿತಿ ನೀಡಿದ್ದು, ಪ್ರತೀ ಕ್ಯಾಂಟೀನ್ನಿಂದ ನೂರು ಊಟಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಊಟವನ್ನು ಅವರು ಬೇರೆ ಕಡೆಯಲ್ಲಿ ಜನರಿಗೆ ಹಂಚುತ್ತಿದ್ದಾರೆ. ಇದರಿಂದ ಕ್ಯಾಂಟೀನ್ ಗೆ ಬರುವ ಜನರಿಗೆ ಸಾಲುತ್ತಿಲ್ಲ ಎಂದು ದೂರಿದ್ದಾರೆ.