ಬೆಂಗಳೂರು : ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಶಾಸಕ ಜಮೀರ್ ಗೋಲಿಬಾರ್ನಲ್ಲಿ ಸತ್ತವರಿಗೆ 5 ಲಕ್ಷ ರೂ ಕೊಟ್ಟಿದ್ದರು.
ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಿದ ಪಾಲಿಕೆ ಸದಸ್ಯ - ಡಿಜೆ ಹಳ್ಳಿ ದಂಧಾಲೆ ಪ್ರಕರಣ
ಡಿ.ಜೆ.ಹಳ್ಳಿ ಪ್ರಕರಣ ತನಿಖೆ ಹಂತದಲ್ಲಿ ಇರುವಾಗ ಗೋಲಿಬಾರ್ನಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಲಕ್ಷ ಲಕ್ಷ ರೂ. ಪರಿಹಾರ ಹಣ ನೀಡಲಾಗುತ್ತಿದೆ. ಸದ್ಯ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂ. ಪರಿಹಾರ ಧನ ಘೋಷಣೆ ಮಾಡಿದ್ದಾರೆ.
ಕಾರ್ಪೋರೇಟರ್ ಇಮ್ರಾನ್ ಪಾಷಾ
2 ಲಕ್ಷ ರೂ. ಪರಿಹಾರ ನೀಡಿರುವ ಇಮ್ರಾನ್ ಪಾಷಾ ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ತನಿಖೆ ಹಂತದಲ್ಲಿರುವಾಗಲೇ ಲಕ್ಷ ಲಕ್ಷ ಹಣ ನೀಡುತ್ತಿರುವುದು ಇವರು ಅಮಾಯಕರ ಪರನಾ..? ಅಥವಾ ಕಿಡಿಗೇಡಿಗಳ ಬೆನ್ನಿಗೆ ನಿಂತಿದ್ದಾರಾ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.
ಇಮ್ರಾನ್ ಪಾಷ ಪಾದರಾಯನಪುರದ ಕಾರ್ಪೋರೇಟರ್ ಆಗಿದ್ದು, ಈ ಹಿಂದೆ ಪಾದರಾಯನಪುರ ಕೊರೊನಾ ವಾರಿಯರ್ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳು ಅಮಾಯಕರು ಎಂದು ಇದೇ ರೀತಿ ಸಹಾಯ ಮಾಡಿದ್ದರು. ಅಲ್ಲದೆ ಕೊರೊನಾ ನಿಯಮ ಮೀರಿ ಜೈಲು ಪಾಲಾಗಿದ್ದರು.