ಕರ್ನಾಟಕ

karnataka

ETV Bharat / state

ಸಾವರ್ಕರ್ ಫೋಟೋ ವಿವಾದಕ್ಕೆ ಪಾಲಿಕೆ ಬ್ರೇಕ್.. ಏಕಾಏಕಿ ಫೋಟೋ ಫ್ಲೆಕ್ಸ್ ತೆರವು

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸಾವರ್ಕರ್​ ಫೋಟೋ ಅನ್ನು ನಿನ್ನೆ ಪೊಲೀಸರ ವಿರೋಧ ಲೆಕ್ಕಿಸದೇ ಫ್ಲೆಕ್ಸ್ ಹಾಕಿದ್ದ ಹಿಂದೂ ಸಂಘಟನೆ ಕಾರ್ಯಕರ್ತರು ವಿವಾದಕ್ಕೆ ಅಡಿಪಾಯ ಹಾಕಿದ್ದರು.

corporation-break-over-savarkar-photo-controversy
ಸಾವರ್ಕರ್ ಪೋಟೋ ವಿವಾದಕ್ಕೆ ಪಾಲಿಕೆ ಬ್ರೇಕ್

By

Published : Sep 1, 2022, 12:24 PM IST

Updated : Sep 1, 2022, 1:26 PM IST

ಹುಬ್ಬಳ್ಳಿ:ಈದ್ಗಾ ಮೈದಾನ ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ವಿವಾದಕ್ಕೆ ಹುಬ್ಬಳ್ಳಿ-ಧಾರಾವಾಡ ಮಹಾನಗರ ಪಾಲಿಕೆ ತೆರೆ ಎಳೆದಿದ್ದು, ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ ತೆರವುಗೊಳಿಸುವ ಮೂಲಕ ವಿವಾದಕ್ಕೆ ಬ್ರೇಕ್ ಹಾಕಿದೆ.

ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಗಣೇಶ ಮೂರ್ತಿ ಹಿಂದುಗಡೆ ಹಾಕಿದ್ದ ಫ್ಲೆಕ್ಸ್ ತೆರವು ಮಾಡಿದ್ದು, ಮುಂದಿನ ದಿನಗಳಲ್ಲಿ ಅನುಮತಿಗೆ ತೊಂದರೆ ಆಗಬಹುದು ಎನ್ನುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೊನೆಗೂ ಗಣೇಶ ಪೆಂಡಾಲ್​ನಲ್ಲಿದ್ದ ಸಾವರ್ಕರ್ ಫೋಟೋ ತೆರವು ಮಾಡಿದ್ದಾರೆ.

ನಿನ್ನೆಯಷ್ಟೇ ಪ್ರಮೋದ್ ಮುತಾಲಿಕ್ ಅವರು ಸಾವರ್ಕರ್ ಫೋಟೋ ಪ್ರದರ್ಶನ ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಆದರೆ ಹು-ಧಾ ಮಹಾನಗರ ಪಾಲಿಕೆ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಸಾವರ್ಕರ್ ಫೋಟೋ ಇರುವ ಫ್ಲೆಕ್ಸ್ ತೆರವು ಮಾಡಿದೆ.

ಸಾವರ್ಕರ್ ಫೋಟೋ ವಿವಾದಕ್ಕೆ ಪಾಲಿಕೆ ಬ್ರೇಕ್

ನಿನ್ನೆ ಪೊಲೀಸರ ವಿರೋಧ ಲೆಕ್ಕಿಸದೇ ಫ್ಲೆಕ್ಸ್ ಹಾಕಿದ್ದ ಹಿಂದೂ ಸಂಘಟನೆ ಕಾರ್ಯಕರ್ತರು ವಿವಾದಕ್ಕೆ ಅಡಿಪಾಯ ಹಾಕಿದ್ದರು. ಆದರೆ ಗಣೇಶ ಮೂರ್ತಿ ಹೊರತುಪಡಿಸಿ ಯಾವುದೇ ಮೂರ್ತಿ, ಫೋಟೋ, ಫ್ಲೆಕ್ಸ್ ಅಳವಡಿಸುವಂತಿಲ್ಲ ಎಂಬುವಂತ ನಿಬಂಧನೆ ಹಾಕಿದ್ದ ಪಾಲಿಕೆ ಏಕಾಏಕಿ ತೆರವು ಮಾಡಿದೆ.

ಒಳಗಿನ ಫೋಟೋ ತೆಗೆದು ರಸ್ತೆಯಲ್ಲಿ ಇಟ್ಟ ಆಯೋಜಕರು:ಕೊನೆಗೂ ಎಚ್ಚೆತ್ತ ಆಯೋಜಕರು ಗಣೇಶ ಪೆಂಡಾಲ್​ನಲ್ಲಿದ್ದ ಸಾವರ್ಕರ್ ಫೋಟೋ ತೆರವು ಮಾಡಿ, ಅದೇ ಫೋಟೋವನ್ನು ಈದ್ಗಾ ಮೈದಾನದ ಹೊರಗಿನ ದ್ವಾರದಲ್ಲಿ ಅಳವಡಿಕೆ ಮಾಡಿದ್ದಾರೆ. ಈದ್ಗಾ ಮೈದಾನಕ್ಕೆ ಹೊಂದಿಕೊಂಡಿರುವ ರಸ್ತೆಗೆ ಸಾವರ್ಕರ್ ದೊಡ್ಡ ಫೋಟೊವನ್ನು ಅಳವಡಿಸಿದ್ದಾರೆ.

ಇದನ್ನೂ ಓದಿ :ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ಜೊತೆ ಸಾವರ್ಕರ್: ಕಾನೂನು ಉಲ್ಲಂಘಿಸಿದ ಮಂಡಳಿ

Last Updated : Sep 1, 2022, 1:26 PM IST

ABOUT THE AUTHOR

...view details