ಕರ್ನಾಟಕ

karnataka

ETV Bharat / state

ಯಾವುದೇ ಕ್ಷಣದಲ್ಲಿ ನಿಗಮ‌ ಮಂಡಳಿ ಪಟ್ಟಿ ಬಿಡುಗಡೆ, 36 ಶಾಸಕರು, 39 ಕಾರ್ಯಕರ್ತರಿಗೆ ಅವಕಾಶ: ಡಿಸಿಎಂ ಡಿಕೆಶಿ - DCM D K Shivakumar

ನಿಗಮ ಮಂಡಳಿ ನೇಮಕಾತಿ ಪಟ್ಟಿ ಈಗಾಗಲೇ ತಯಾರಾಗಿದ್ದು, ಯಾವುದೇ ಕ್ಷಣದಲ್ಲಾದರೂ ಬಿಡುಗಡೆ ಮಾಡಬಹುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ತಿಳಿಸಿದ್ದಾರೆ.

DCM D K Shivakumar
ಡಿಸಿಎಂ ಡಿಕೆ ಶಿವಕುಮಾರ್​

By ETV Bharat Karnataka Team

Published : Jan 18, 2024, 12:30 PM IST

Updated : Jan 18, 2024, 12:57 PM IST

ಡಿಸಿಎಂ ಡಿಕೆ ಶಿವಕುಮಾರ್​

ಬೆಂಗಳೂರು: "ಈ ಸೆಕೆಂಡ್​ನಲ್ಲೇ ನಿಗಮ ಮಂಡಳಿ ನೇಮಕಾತಿ ಪಟ್ಟಿ ಬಿಡುಗಡೆ ಆಗುತ್ತದೆ. ನಿನ್ನೆಯೂ ಹೇಳಿದ್ದೆ, ಇವತ್ತೂ ಅದನ್ನೇ ಹೇಳುತ್ತಿದ್ದೇನೆ. ಯಾವುದೇ ಕ್ಷಣದಲ್ಲಾದರೂ ಪಟ್ಟಿ ಬಿಡುಗಡೆ ಆಗಬಹುದು. 36 ಶಾಸಕರು, 39 ಕಾರ್ಯಕರ್ತರ ಹೆಸರನ್ನು ಪ್ರಕಟಿಸಲಾಗುವುದು" ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ನಿಗಮ ಮಂಡಳಿ ನೇಮಕಾತಿ ಪಟ್ಟಿ ಬಿಡುಗಡೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಚಿವರ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿ, "ಪಕ್ಷದ ಹೈಕಮಾಂಡ್​ ಹೇಳುವುದನ್ನು ನಾನು ಕೇಳಬೇಕು, ಸಚಿವರು ಕೇಳಬೇಕಾಗುತ್ತದೆ. ಪಕ್ಷ ಹೇಳಿದಂತೆ ಎಲ್ಲರೂ ಕೇಳಬೇಕು ಎಂದು ಪರೋಕ್ಷವಾಗಿ ಸಚಿವರು ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ" ಎಂದು ತಿಳಿಸಿದರು.

ಶುಕ್ರವಾರ ಕಾಂಗ್ರೆಸ್ ಮೀಟಿಂಗ್ ನಡೆಯುವ ವಿಚಾರವಾಗಿ ಮಾತನಾಡಿ, "ನಾಳೆ ಕಾಂಗ್ರೆಸ್ ಭಾರತ್ ಜೋಡೋ ಭವನದಲ್ಲಿ ಮೀಟಿಂಗ್ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ‌ ಅವರು ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಆ ಸಂದರ್ಭದಲ್ಲಿ ಅಲ್ಲಿ ಇರಬೇಕಾಗುತ್ತದೆ. ಹೀಗಾಗಿ ಸಂಜೆ 4.30ರ ಬಳಿಕ‌ ಮೀಟಿಂಗ್ ನಡೆಯಲಿದೆ. ಲೋಕಸಭಾ ಚುನಾವಣೆ ಬಗ್ಗೆ ಮೊದಲ ಮೀಟಿಂಗ್ ಇದು. ಈಗಾಗಲೇ ವೀಕ್ಷಕರು ಲಿಸ್ಟ್ ‌ಕೊಟ್ಟಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡುತ್ತೇವೆ?" ಎಂದರು.

ಇದನ್ನೂ ಓದಿ:ಜ.25ರಿಂದ ಶಿವರಾಮ್ ಕಾರಂತ ಬಡಾವಣೆ ನಿವೇಶನಗಳಿಗೆ ಅರ್ಜಿ ಆಹ್ವಾನ

Last Updated : Jan 18, 2024, 12:57 PM IST

ABOUT THE AUTHOR

...view details