ಬೆಂಗಳೂರು :ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರ ಕುರಿತು ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಹತ್ವದ ಸಭೆ ಆರಂಭಗೊಂಡಿದೆ. ನೂತನ ಸದಸ್ಯರ ಪಟ್ಟಿ ಅಂತಿಮ ಸಂಬಂಧ ರಚಿಸಿರುವ ತ್ರಿ-ಸದಸ್ಯ ಸಮಿತಿ ಸಭೆ ನಡೆಸುತ್ತಿದೆ.
ಕಂದಾಯ ಸಚಿವ ಆರ್. ಅಶೋಕ್, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರನ್ನೊಳಗೊಂಡ ಸಮಿತಿ ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ಸಭೆ ನಡೆಸುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಎರಡು ವರ್ಷ ಮುಗಿಸಿರುವ ಅಧ್ಯಕ್ಷರ ಬದಲಾವಣೆ, ಸಮರ್ಥವಾಗಿ ಕಾರ್ಯನಿರ್ವಹಿಸದೆ ಹೆಸರಿಗೆ ಮಾತ್ರ ಅಧ್ಯಕ್ಷರಾಗಿರುವವರ ತೆರವು, ಖಾಲಿ ಇರುವ ಕಡೆ ನೇಮಕ ಕುರಿತು ಚುನಾವಣಾ ವರ್ಷಕ್ಕೆ ಅನುಕೂಲಕರವಾಗುವ ರೀತಿ ಪಟ್ಟಿಯನ್ನು ಅಂತಿಮಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷ ಅಂತಿಮಗೊಳಿಸಿರುವ ಪಟ್ಟಿಯನ್ನು ಪರಿಗಣಿಸಿ ನಿಗಮ ಮಂಡಳಿ ನೇಮಕಾತಿ ಮಾಡುವುದಾಗಿ ಹೇಳಿಕೆ ನೀಡಿರುವುದರಿಂದ, ಇಂದಿನ ಸಭೆ ಮಹತ್ವದ ಪಡೆದುಕೊಂಡಿದೆ.
ಇದನ್ನೂ ಓದಿ:ವರಿಷ್ಠರು ಹೇಳಿದಾಗ ಸಂಪುಟ ವಿಸ್ತರಣೆ, ಪಕ್ಷ ಹೇಳಿದಾಗ ನಿಗಮ ಮಂಡಳಿ ನೇಮಕಾತಿ : ಸಿಎಂ ಬೊಮ್ಮಾಯಿ