ಕರ್ನಾಟಕ

karnataka

ETV Bharat / state

ಸಿಎಂಗೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದ ಕಾರ್ಪೋರೇಟ್ ಸಂಸ್ಥೆಗಳು - handed over medical equipment to CM

ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ 44 ಹೈ ಫ್ಲೋ ನೇಸಲ್ ಕ್ಯಾನುಲಾ ವೈದ್ಯಕೀಯ ಉಪಕರಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಾರ್ಪೋರೇಟ್ ಸಂಸ್ಥೆಗಳ ಹಸ್ತಾಂತರಿಸಿದವು.

ಸಿಎಂಗೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದ ಕಾರ್ಪೋರೇಟ್ ಸಂಸ್ಥೆಗಳು
ಸಿಎಂಗೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದ ಕಾರ್ಪೋರೇಟ್ ಸಂಸ್ಥೆಗಳು

By

Published : Jul 3, 2020, 4:01 PM IST

Updated : Jul 3, 2020, 4:28 PM IST

ಬೆಂಗಳೂರು: ಯುನೈಟೆಡ್ ವೇ ಬೆಂಗಳೂರು, ಸ್ವಯಂ ಸೇವಾ ಸಂಸ್ಥೆ ಹಾಗೂ ಇತರೆ ಕಾರ್ಪೋರೇಟ್ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ 44 ಹೈ ಫ್ಲೋ ನಾಸಲ್ ಕ್ಯಾನುಲಾ ವೈದ್ಯಕೀಯ ಉಪಕರಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರ ಮಾಡಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕಾರ್ಪೋರೇಟ್ ಸಂಸ್ಥೆಗಳ ಪ್ರತಿನಿಧಿಗಳು, ವೈದ್ಯಕೀಯ ಪರಿಕರಗಳನ್ನು ಸಿಎಂ ಯಡಿಯೂರಪ್ಪ ಅವರಿಗೆ ನೀಡಿದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳ ಕುರಿತು ಪ್ರತಿನಿಧಿಗಳು ಸಿಎಂಗೆ ಮಾಹಿತಿ ಕೊಟ್ಟರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ಯಾಮ್ಸಂಗ್ ಆರ್ ಅಂಡ್ ಡಿ ವತಿಯಿಂದ ಸಿಎಂ ಕೋವಿಡ್​-19 ಪರಿಹಾರ ನಿಧಿಗೆ ಚೆಕ್​

ಸಿಎಂ ಕೋವಿಡ್​-19 ಪರಿಹಾರ ನಿಧಿಗೆ 6,99,404 ರೂ.ಗಳ ಚೆಕ್:

ಮುಖ್ಯಮಂತ್ರಿಗಳ ಕೋವಿಡ್ -19 ಪರಿಹಾರ ನಿಧಿಗೆ ಇಂದು ಬೆಂಗಳೂರಿನ ಸ್ಯಾಮ್ಸಂಗ್ ಆರ್ ಅಂಡ್ ಡಿ ವಿಭಾಗದ ವತಿಯಿಂದ 6,99,404 ರೂ.ಗಳ ಚೆಕ್​ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು.

Last Updated : Jul 3, 2020, 4:28 PM IST

ABOUT THE AUTHOR

...view details