ಬೆಂಗಳೂರು :ಲಾಕ್‌ಡೌನ್ ಆದೇಶದಿಂದಾಗಿ ಲಕ್ಷಾಂತರ ಅಸಂಘಟಿತ ಕಾರ್ಮಿಕರು ಒಂದೊತ್ತಿನ ಊಟಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ಕೆಲಸವಿಲ್ಲದೆ ಕೈಯಲ್ಲಿ ಹಣವೂ ಇಲ್ಲದೇ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹವರಿಗಾಗಿಯೇ ಸರ್ಕಾರ ಉಚಿತವಾಗಿ ಹಾಲು ನೀಡುತ್ತಿದೆ.
ಸಾರ್ವಜನಿಕರಿಗೆ ಉಚಿತವಾಗಿ ಹಾಲು ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ಇದರಂತೆ ಬಿಬಿಎಂಪಿ ವ್ಯಾಪ್ತಿಗೆ ಬರುವ ಕೆಆರ್‌ಪುರಂನ ಸೀಗೆಹಳ್ಳಿ ಸ್ಲಂಬೋರ್ಡ್ನಲ್ಲಿ ಬಸವನಪುರ ವಾರ್ಡ್ ಕಾರ್ಪೊರೇಟರ್ ಜಯಪ್ರಕಾಶ್ ನೇತೃತ್ವದಲ್ಲಿ ಉಚಿತವಾಗಿ ಮನೆ ಮನೆಗೂ ಒಂದು ಲೀಟರ್ ನಂದಿನಿ ಹಾಲು ವಿತರಿಸಲಾಯಿತು.