ಬೆಂಗಳೂರು: ಕೊರೊನಾ ವೈರಸ್ ಎಫೆಕ್ಟ್ನಿಂದಾಗಿ ಕರ್ನಾಟಕ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಈ ಬಾರಿ ಹಬ್ಬಗಳು ಕಳೆಗುಂದಿವೆ. ಕಳೆದ ಎಂಟು ದಿನಗಳ ಹಿಂದೆಯಷ್ಟೇ ಹೊಸ ಸಂವತ್ಸರ ಆರಂಭವಾಗುವ ಯುಗಾದಿ ಹಬ್ಬ ಆಚರಿಸಲಾಯಿತು. ಆದರೆ, ಆ ಹಬ್ಬದ ಸಡಗರವನ್ನೂ ಕೊರೊನಾ ಎಂಬ ಹೆಮ್ಮಾರಿ ಕಸಿದಿತ್ತು. ಇದೇ ಕೊರೊನಾ ಹೆಮ್ಮಾರಿ ರಾಮನವಮಿ ಹಬ್ಬದ ಸಂಭ್ರಮಕ್ಕೂ ಕಾರ್ಮೋಡ ಆವರಿಸುವಂತೆ ಮಾಡಿದೆ.
ರಾಮನವಮಿ ಹಬ್ಬದ ಸಂಭ್ರಮಕ್ಕೂ ಕೊರೊನಾ ವೈರಸ್ ಕಂಟಕ! - corona prevention
ಎಲ್ಲೆಡೆ ದೇವಸ್ಥಾನಗಳು ಹಾಗೂ ರಸ್ತೆ ಪಕ್ಕದಲ್ಲಿ ಪಾನಕ, ಕೋಸಂಬರಿ ವಿತರಿಸಿ ಸಾರ್ವಜನಿಕರು ಸಂಭ್ರಮಿಸುತ್ತಿದ್ದರು. ಜನ ಗುಂಪಾಗಿ ಸೇರುವುದರಿಂದ ಈ ಬಾರಿ ರಸ್ತೆಯಲ್ಲಿ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಿಸುವುದನ್ನು ನಿಷೇಧಿಸಲಾಗಿದೆ.
ರಾಮನವಮಿ ಹಬ್ಬಕ್ಕೂ ಎದರಾದ ಕೊರೊನಾ ವೈರಸ್ ಕಂಟಕ
ರಾಜಧಾನಿ ಬೆಂಗಳೂರು ಸೇರಿ ಎಲ್ಲೆಡೆ ದೇವಸ್ಥಾನಗಳು ಹಾಗೂ ರಸ್ತೆ ಪಕ್ಕದಲ್ಲಿ ಪಾನಕ, ಕೋಸಂಬರಿ ವಿತರಿಸಿ ಸಾರ್ವಜನಿಕರು ಸಂಭ್ರಮಿಸುತ್ತಿದ್ದರು. ಜನ ಗುಂಪಾಗಿ ಸೇರುವುದರಿಂದ ಈ ಬಾರಿ ರಸ್ತೆಯಲ್ಲಿ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಿಸುವುದನ್ನು ನಿಷೇಧಿಸಲಾಗಿದೆ. ಹಬ್ಬದ ವ್ಯಾಪಾರ, ವಹಿವಾಟು ಸಹ ಅಷ್ಟಾಗಿ ಕಂಡು ಬರಲಿಲ್ಲ. ರಾಮನವಮಿ ಹಬ್ಬ ಎಲ್ಲರೂ ಸಂತೋಷದಿಂದ ಆಚರಣೆ ಮಾಡಬೇಕು. ಆದರೆ, ಕೊರೊನಾ ವೈರಸ್ ಆ ಸಂಭ್ರಮವನ್ನು ಕಸಿದು ಕೊಂಡಿದೆ.