ಬೆಂಗಳೂರು:ಕೊರೊನಾ ಈಗ ರಾಜ್ಯದೆಲ್ಲೆಡೆ ಭಯ ಮೂಡಿಸಿದ್ದು, ಈಗಾಗಲೇ ಆರೋಗ್ಯ ಇಲಾಖೆ ಸಕಲ ರೀತಿಯ ಮುನ್ನೆಚ್ಚೆರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಗಳನ್ನು ಗುರುತಿಸಲಾಗಿದೆ.
ಕೊರೊನಾಗೆ 'ಆ್ಯಂಟಿ' ವೈರಸ್: ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಸಿಗಲಿದೆ ಚಿಕಿತ್ಸೆ.. - ಕೊರೊನಾ ವೈರಸ್ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳು
ದೇಶ ಸೇರಿದಂತೆ ವಿಶ್ವದ ಹಲವೆಡೆ ಭಯ ಹುಟ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಆರೋಗ್ಯ ಇಲಾಖೆಗಳು ಅಗತ್ಯ ಕ್ರಮ ಕೈಗೊಂಡಿವೆ. ರಾಜ್ಯದಲ್ಲಿ ಕೂಡ ಆರೋಗ್ಯ ಇಲಾಖೆ ಕೊರೊನಾ ಚಿಕಿತ್ಸೆಗೆ ಸಕಲ ಸೌಲಭ್ಯ ಒದಗಿಸಿದೆ.
ಕೊರೊನಾ ವೈರಸ್
ಬೆಂಗಳೂರಿನ ಈ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿದೆ:
- ಬೌರಿಂಗ್ ಲೇಡಿ ಕರ್ಜನ್,
- ವಿಕ್ಟೋರಿಯಾ ಆಸ್ಪತ್ರೆ,
- ಕೆ.ಸಿ. ಜನರಲ್ ಆಸ್ಪತ್ರೆ,
- ಇಂದಿರಾನಗರ ಜನರಲ್ ಆಸ್ಪತ್ರೆ
- ಇಎಸ್ಐಸಿ ಮಾಡೆಲ್ ಆಸ್ಪತ್ರೆ, ರಾಜಾಜಿನಗರ
- ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್
- ಜಯನಗರ ಜನರಲ್ ಆಸ್ಪತ್ರೆ
- ಟಿಎಲ್ಹೆಚ್, ಕೆ. ಆರ್. ಪುರಂ
- ಟಿಎಲ್ಹೆಚ್ (ಉತ್ತರ ವಿಭಾಗ), ಯಲಹಂಕ
- ಬಿಜಿಎಸ್ ಜಿಐಎಂಎಸ್ ಆಸ್ಪತ್ರೆ
- ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ
- ಜನರಲ್ ಆಸ್ಪತ್ರೆ, ನೆಲಮಂಗಲ
- ಜನರಲ್ ಆಸ್ಪತ್ರೆ, ದೇವನಹಳ್ಳಿ
- ಜನರಲ್ ಆಸ್ಪತ್ರೆ, ದೊಡ್ಡಬಳ್ಳಾಪುರ
- ಜನರಲ್ ಆಸ್ಪತ್ರೆ ಹೊಸಕೋಟೆ
- ಜನರಲ್ ಆಸ್ಪತ್ರೆ ಆನೇಕಲ್
- ಕೆಂಗೇರಿ ಸಿಹೆಚ್ಸಿ