ಬೆಂಗಳೂರು: ಇಂದು ಒಂದೇ ದಿನ ರಾಜ್ಯದಲ್ಲಿ 17 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 232 ಆಗಿದೆ. ಈವರೆಗೆ 54 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಇವತ್ತಿನ ಪ್ರಕರಣಗಳಲ್ಲಿ ವಿಜಯಪುರದ ಪ್ರಕರಣಗಳು ಅಚ್ಚರಿ ಮೂಡಿಸುತ್ತಿದೆ. ವಿಜಯಪುರದ 6 ಸೋಂಕಿತರಲ್ಲಿ 5 ಜನರಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಇನ್ನು ಕಲಬುರಗಿಯ 2 ವರ್ಷದ ಮಗುವಿಗೂ ಸೋಂಕು ತಗುಲಿದೆ.
ಸೋಂಕಿತರ ಟ್ರಾವೆಲ್ ಹಿಸ್ಟರಿ? ( 216-232)
ರೋಗಿ-216 :ಮೈಸೂರಿನ 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು. ರೋಗಿ-88 ರ ಸಂಪರ್ಕ ಹೊಂದಿದ್ದು, ಫಾರ್ಮ ಕಂಪನಿಯ ಸಿಬ್ಬಂದಿಯಾಗಿದ್ದು, ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ-217 : 75 ವರ್ಷದ ವೃದ್ದೆಗೂ ಕೊರೊನಾ ಸೋಂಕು ಬೆಂಗಳೂರು ನಿವಾಸಿಯಾಗಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-218: ಬೆಂಗಳೂರಿನ 58 ವರ್ಷದ ವ್ಯಕ್ತಿಗೆ ಸೋಂಕು. ಇಂಡೋನೇಷ್ಯಾಗೆ ಪ್ರಯಾಣ ಮಾಡಿದ್ದು, ಮಾರ್ಚ್ 21 ರಂದು ಭಾರತಕ್ಕೆ ಹಿಂದಿರುಗಿದ್ದಾರೆ. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-21: ಬೆಂಗಳೂರಿನ 76 ವರ್ಷದ ವ್ಯಕ್ತಿಗೆ ಸೋಂಕು. ತೀವ್ರ ಉಸಿರಾಟದ ತೊಂದರೆ ಇದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-220: ಕಲಬುರಗಿಯ ನಿವಾಸಿಯಾಗಿದ್ದು, 24 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ರೋಗಿ 177 ರ ಸಂಪರ್ಕ ಹೊಂದಿದ್ದು, ಸೊಸೆಗೂ ಸೋಂಕು. ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-221: ವಿಜಯಪುರದ 60 ವರ್ಷದ ಮಹಿಳೆಗೂ ಸೋಂಕು. ತೀವ್ರ ಉಸಿರಾಟ ಸಮಸ್ಯೆ ಇದ್ದು, ವಿಜಯಪುರದಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-222: ಕಲಬುರಗಿಯ 38ವರ್ಷದ ಮಹಿಳೆಗೆ ಸೋಂಕು. ರೋಗಿ 177 ರ ಸಂಪರ್ಕ ಹೊಂದಿದ್ದು, ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-223: ಬೆಳಗಾವಿಯ ರಾಯಭಾಗದಲ್ಲಿ 19 ವರ್ಷದ ಯುವಕನಿಗೂ ಸೋಂಕು. 150 ರ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-224: ಬೆಳಗಾವಿಯ ಹಿರೇಬಾಗೆವಾಡಿಯ 38 ವರ್ಷದ ವ್ಯಕ್ತಿಗೆ ಸೋಂಕು. ರೋಗಿ 128 ರ ಸಂಪರ್ಕ ಹೊಂದಿದ್ದಾರೆ. ಬೆಳಗಾವಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.