- ಸಿಎಂ ನಿವಾಸದ ಬಳಿ ಇರುವ 6 ಮಂದಿಗೆ ಕೊರೊನಾ ಶಂಕೆ
- ಒಂದೇ ಕುಟುಂಬದ 6 ಮಂದಿಗೆ ಶಂಕೆ
- ರಾಜೀವ್ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಲಂಡನ್ನಿಂದ ನಗರಕ್ಕೆ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್
- ಆತನಿಂದ ಉಳಿದವರಿಗೆ ಸೋಂಕು ತಗುಲಿರುವ ಶಂಕೆ
- ಐಸೋಲೇಟೆಡ್ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿಕೆ
ಸಿಎಂ ನಿವಾಸದ ಬಳಿ 6ಮಂದಿಗೆ ಕೊರೊನಾ ಶಂಕೆ...ಐಸೋಲೇಟೆಡ್ ವಾರ್ಡ್ನಲ್ಲಿ ಚಿಕಿತ್ಸೆ
19:57 March 24
ಸಿಎಂ ನಿವಾಸದ ಬಳಿ 6ಮಂದಿಗೆ ಕೊರೊನಾ ಶಂಕೆ...
19:06 March 24
ಅಧಿಕೃತ ಮಾಹಿತಿ
- ರಾಜ್ಯದಲ್ಲಿ 41ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
- ಇಂದು ಒಂದೇ ದಿನ 8 ಮಂದಿಗೆ ಪಾಸಿಟಿವ್ ಪ್ರಕರಣಗಳು
- ವಿವಿಧ ಆಸ್ಪತ್ರೆಗಳಲ್ಲಿ 48 ಶಂಕಿತರು ಚಿಕಿತ್ಸೆ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
- ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್
19:02 March 24
ವಾರ್ ರೂಮ್ಗೆ ಬಂದ ಬಿಎಸ್ವೈ
- ಕೊರೊನಾ ವೈರಸ್ ತಡೆಗಟ್ಟಲು ಬಿಬಿಎಂಪಿ ಸ್ಥಾಪಿಸಿರುವ ವಾರ್ ರೂಮ್ಗೆ ಭೇಟಿ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ
- ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಡಿ ಸುಧಾಕರ್ ಇದ್ದರು
17:42 March 24
- ಚಿತ್ರದುರ್ಗ ಜಿಲ್ಲೆಯಲ್ಲಿ 37 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್
- ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಮಹಿಳೆ
- ಗಯಾನಾ ದೇಶದಿಂದ ಬಂದಿದ್ದ ಮಹಿಳೆ
- ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಗೆ ಮಹಿಳೆಯನ್ನು ಶಿಫ್ಟ್ ಮಾಡಲು ಸಿದ್ಧತೆ
17:19 March 24
ಹಬ್ಬವನ್ನು ಸರಳವಾಗಿ ಆಚರಿಸಿ, ಲಾಕ್ಡೌನ್ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ-ಸಿಎಂ ಎಚ್ಚರಿಕೆ
- 12029 ಮಂದಿ ಸೋಂಕು ಶಂಕಿತರು ಇದ್ದಾರೆ
- 1477 ಮಂದಿಗೆ ರಕ್ತ ಮತ್ತು ಗಂಟಲು ದ್ರವ ಪರೀಕ್ಷಾ ಮಾಡಲಾಗಿದೆ
- 127609 ಮಂದಿ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದವರ ಸಂಖ್ಯೆ
- 123 ಮಂದಿ ಐಸಲೋಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ
- ರಾಜ್ಯದಲ್ಲಿ ಹೆಚ್ಚು ನಿರ್ಬಂಧ ಮಾಡಲಾಗಿದೆ-ಬಿಎಸ್ವೈ ಮಾಹಿತಿ
- ದಿನಾಲೂ ಪೀಡಿತರ, ಶಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ
- ಕೊರೊನಾ ಓಡಿಸಲು ಎಲ್ಲರೂ ಒಗ್ಗಟ್ಟಾಗಬೇಕು
- ಯುಗಾದಿ ಹಬ್ಬವನ್ನು ‘ಸರಳವಾಗಿ ಆಚರಿಸಬೇಕು: ಸಿಎಂ ಎಚ್ಚರಿಕೆ
- ಲಾಕ್ಡೌನ್ ಮಾಡಿದ್ದರೂ ಜನ ಮನೆಯಿಂದ ಹೊರ ಬಂದಿದ್ದಾರೆ
- ನಾಳೆಯಿಂದ ಲಾಕ್ಡೌನ್ಗೆ ಮತ್ತಷ್ಟು ಬಿಗಿ ಕ್ರಮ
- ಲಾಕ್ಡೌನ್ ಉಲ್ಲಂಘನೆ ಮಾಡಿದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳುತ್ತೇವೆ-ಯಡಿಯೂರಪ್ಪ ಎಚ್ಚರಿಕೆ
- ದೇಶದಲ್ಲಿ ಕೊರೊನಾ ಸಂಖ್ಯೆ ಪೀಡಿತರ ಸಂಖ್ಯೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ
- ಬೆಂಗಳೂರಿಗೆ ಬರುವವರಿದ್ದರೆ, ಇಂದು ರಾತ್ರಿಯೇ ಬರಲಿ. ಹೋಗುವವರು ಇಂದು ರಾತ್ರಿಯೇ ಹೋಗಲಿ
- ನಾಳೆಯಿಂದ ಯಾರೂ ಎಲ್ಲೂ ಹೋಗುವ ಆಗಿಲ್ಲ-ಸಿಎಂ ಖಡಕ್ ಎಚ್ಚರಿಕೆ
17:10 March 24
ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ಸೋಂಕಿತರು
- ಸ್ಕ್ರೀನಿಂಗ್ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ಸೋಂಕಿತರು
- ಮಾರ್ಚ್ 20ರಂದು ಮುಂಜಾನೆ 5.30ಕ್ಕೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪೀಡಿತರು
- ಕೊಲ್ಕತ್ತಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ 70 ವರ್ಷದ ವ್ಯಕ್ತಿ
- ಕಾಸರಗೋಡು ಮೂಲದ ಮತ್ತೊಬ್ಬ ವ್ಯಕ್ತಿ
- ಎಲ್ಲರೂ ಕೇರಳದ ಮೂಲದವರು ಎಂದು ತಿಳಿದು ಬಂದಿದೆ
16:59 March 24
43 ಮಂದಿಗೆ ಕೊರೊನಾ ಸೋಂಕು
- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ಕೊರೊನಾ ಸೋಂಕು
- 43ಕ್ಕೆ ಏರಿದ ಪೀಡಿತರ ಸಂಖ್ಯೆ
- ಒಂದು ಒಂದೇ ದಿನ 6 ಮಂದಿಗೆ ಸೋಂಕು
- ಮಂಗಳೂರಿನಲ್ಲೇ ತಗುಲಿದೆ ನಾಲ್ವರಿಗೆ ಸೋಂಕು
- ಮಂಗಳೂರಿನಲ್ಲಿರುವ ಕೇರಳದವರಿಗೆ ಕೊರೊನಾ ಸೋಂಕು
16:47 March 24
ಲಕ್ಷ ಜನರಿಗೆ ಕೊರೊನಾ ಸೋಂಕು ಸಾಧ್ಯತೆ?: ಡಿಸಿಎಂ ಹೇಳಿಕೆ
- ಒಂದು ಲಕ್ಷ ಜನರಿಗೆ ಕೊರೊನಾ ಸೋಂಕಿನ ಅಂದಾಜು
- 9 ಜಿಲ್ಲೆಗಳಲ್ಲಿ ಕೊರೊನಾ ಪೀಡಿತರಿಗೆ ಆಸ್ಪತ್ರೆ
- ಜಿಲ್ಲಾ ಮಟ್ಟದಲ್ಲಿ ಡಿಸಿ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆ
- ವಿಧಾನ ಪರಿಷತ್ನಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿಕೆ
- ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾದಲ್ಲಿ 1700 ಬೆಡ್
- 20 ಸಾವಿರ ಹೋಟೆಲ್ಗಳಲ್ಲಿ ಕ್ವಾರಂಟೈನ್ ನಿರ್ಮಾಣಕ್ಕೆ ಸಜ್ಜು
16:42 March 24
ವೈದ್ಯಕೀಯ ಶಿಕ್ಷಣ ಸುಧಾಕರ್ಗೆ ಸಂಪೂರ್ಣ ಜವಾಬ್ದಾರಿ
- ಇಂದು ಐವರಲ್ಲಿ ಕೊರೊನಾ ಸೋಂಕು ಪತ್ತೆ
- ಕರ್ನಾಟಕದಲ್ಲಿ 38ಕ್ಕೆ ಏರಿದ ಕೊರೊನಾ ಸೋಂಕು ಪೀಡಿತರ ಸಂಖ್ಯೆ
- ಸಚಿವ ರಾಮುಲು ಬಳಿ ಇದ್ದ ಜವಾಬ್ದಾರಿಯನ್ನು ಸುಧಾಕರ್ಗೆ ವರ್ಗಾವಣೆ
- ಆರೋಗ್ಯ ಇಲಾಖೆ ಅಡಿ ಇದ್ದ ಜವಾಬ್ದಾರಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆ
- ವೈದ್ಯಕೀಯ ಶಿಕ್ಷಣ ಡಾ.ಸುಧಾಕರ್ಗೆ ಕೊರೊನಾಗೆ ಸಂಬಂಧಿಸಿದ ಉಸ್ತುವಾರಿ
- ಸುತ್ತೋಲೆ ಹೊರಡಿಸಿದ ಆದೇಶಿಸಿದ ಸರ್ಕಾರ
- ಕೋವಿಡ್ 19ಕ್ಕೆ ಸಂಬಂಧಿಸಿದಂತೆ ಒಬ್ಬರಿಗೆ ಉಸ್ತುವಾರಿ ವಹಿಸುವುದು ಸರ್ಕಾರದ ಉದ್ದೇಶ
16:11 March 24
ರಾಜ್ಯದಲ್ಲಿ ಮತ್ತೆ ಕೋವಿಡ್-19ರ ಸೋಂಕು ಹೆಚ್ಚಳ
ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ತವರು ಜಿಲ್ಲೆಯಲ್ಲಿ ಮೂವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ತಾಯಿ ಹಾಗೂ ಸಹೋದರನ ಜೊತೆ ಮೆಕ್ಕಾಗೆ ತೆರಳಿದ್ದ ಮಹಿಳೆಗೆ ಸೋಂಕು ತಗುಲಿದೆ.