ಬೆಂಗಳೂರು: ರಾಜ್ಯದಲ್ಲಿಂದು 13,800 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26,83,314 ಕ್ಕೆ ಏರಿಕೆ ಆಗಿದೆ.
25,346 ಮಂದಿ ಡಿಸ್ಜಾರ್ಜ್ ಆಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 23,83,758 ಕ್ಕೆ ಏರಿಕೆಯಾಗಿದೆ. ಸದ್ಯ ಸಕ್ರಿಯ ಪ್ರಕರಣಗಳು 2,68,275 ರಷ್ಟು ಇದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 9.69 ರಷ್ಟಿದ್ದು, ಸಾವಿನ ಶೇಕಡವಾರು ಪ್ರಮಾಣ 2.64 ರಷ್ಟಿದೆ. ಕೋವಿಡ್ ಗೆ 365 ಸೋಂಕಿತರು ಇಂದು ಬಲಿಯಾಗಿದ್ದು, ಸಾವಿನ ಸಂಖ್ಯೆ 31,260 ಕ್ಕೆ ಏರಿದೆ.