ಕರ್ನಾಟಕ

karnataka

ETV Bharat / state

100ಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ: ಹೊಂಗಸಂದ್ರ ಈಗ ನಿಯಂತ್ರಿತ ವಲಯ! - Coronavirus cases in Bangaluru

ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ 100ಕ್ಕೆ ಬಂದು ತಲುಪಿದೆ. ಶತಕ ಪೂರೈಸಿದ ಡೆಡ್ಲಿ ವೈರಸ್​ನಿಂದ ಬೆಂಗಳೂರಿನ ಜನರಲ್ಲಿ ಆತಂಕ ಹೆಚ್ಚಿಸಿದೆ.

Coronavirus cases in Bangaluru: Toll crosses 100
100ಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ

By

Published : Apr 23, 2020, 8:28 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 100 ತಲುಪಿದೆ. ಇಂದು ಹೊಸ 9 ಪ್ರಕರಣ ಬೊಮ್ಮನಹಳ್ಳಿ ವಲಯದ ಹೊಂಗಸಂದ್ರ ವಾರ್ಡ್​ನಲ್ಲಿ ಕಂಡುಬಂದಿದೆ ಎಂದು ವಾರ್ ರೂಂ ಬುಲೆಟಿನ್ ಬಿಡುಗಡೆ ಮಾಡಿದೆ.

100ಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ

ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶದ ಪ್ರಕಾರ ನಗರದಲ್ಲಿ ಕೊರೊನಾ ಸೋಂಕಿತರ ಪ್ರಮಾಣ 101 ಆಗಿದೆ. ಒಟ್ಟಿನಲ್ಲಿ ನಿನ್ನೆ 7 ಇದ್ದ ಬೊಮ್ಮನಹಳ್ಳಿ ವಲಯದ ಕೊರೊನಾ ಸೋಂಕಿತರ ಸಂಖ್ಯೆ ಈಗ 17 ಆಗಿದೆ. ಪಶ್ಚಿಮ ವಲಯದಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕಿತರಿದ್ದು ಸೋಂಕಿತರ ಪ್ರಮಾಣ 29 ಕ್ಕೆ ಏರಿಕೆಯಾಗಿದೆ. ಒಟ್ಟು ಬೆಂಗಳೂರಿನಲ್ಲಿ 100 ಕೊರೊನಾ ಪಾಸಿಟಿವ್, 48 ಗುಣಮುಖರಾದವರು ಹಾಗೂ ನಾಲ್ವರು ಮೃತಪಟ್ಟಿದ್ದಾರೆ.

100ಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ

ಕಂಟೇನ್ಮೆಂಟ್​ ಜೋನ್​ಗಳ ಪಟ್ಟಿಯಲ್ಲಿ ಹೊಂಗಸಂದ್ರ ಸೇರ್ಪಡೆಯಾಗಿದೆ. ನಗರದಲ್ಲಿ ಪ್ರಾಥಮಿಕ ಸಂಪರ್ಕ ಪತ್ತೆಹಚ್ಚಿದ ಒಟ್ಟು 748 ರಲ್ಲಿ 450 ಕ್ವಾರಂಟೈನ್​ನಲ್ಲಿದ್ದು, ದ್ವಿತೀಯ ಸಂಪರ್ಕದ ಒಟ್ಟು 4197 ರಲ್ಲಿ 1285 ಜನ ಕ್ವಾರಂಟೈನ್ ಅವಧಿಯಲ್ಲಿದ್ದಾರೆ. ಪಾಲಿಕೆಯ ಫೀವರ್ ಕ್ಲಿನಿಕ್​ನಲ್ಲಿ ಒಟ್ಟು 4887 ಜನರ ಸ್ಕ್ರೀನಿಂಗ್ ನಡೆದಿದ್ದು, 21ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.

ABOUT THE AUTHOR

...view details