ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಬೆಡ್ ಮೀಸಲಿರಿಸಲು ಬಿಬಿಎಂಪಿ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬೆಡ್‌ಗಳ ನಿರ್ವಹಣೆಗಾಗಿ ಐಎಎಸ್ ಹಾಗೂ ಐಪಿಎಸ್ ದರ್ಜೆಯ ಅಧಿಕಾರಿಗಳನ್ನು ಒಳಗೊಂಡ ನೋಡಲ್ ಅಧಿಕಾರಿಗಳ ತಂಡವನ್ನು ನೇಮಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಕೋವಿಡ್‌ಗೆ ಚಿಕಿತ್ಸೆ: ಬೆಡ್‌ಗಳಿಗಾಗಿ ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಪ್ಪಂದ - ಕೊರೊನಾ ಅಲೆ,
ಕೊರೊನಾ ಎರಡನೇ ಅಲೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ.

ಬೆಡ್‌ಗಳಿಗಾಗಿ ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಪ್ಪಂದ
ನಗರ ಪೂರ್ವ ವಲಯ 1 - ಕ್ಯಾ. ಮಣಿವಣ್ಣನ್ ಹಾಗೂ ಅಲೋಕ್ ಕುಮಾರ್, ಪೂರ್ವ ವಲಯ 2 - ಮೊಹಮ್ಮದ್ ಮೊಹಸೀನ್ ಹಾಗೂ ಹರಿಶೇಖರನ್, ಮಹದೇವಪುರ ವಲಯ - ಉಮಾ ಮಹದೇವನ್ ಹಾಗೂ ಸುನೀಲ್ ಅಗರ್‌ವಾಲ್, ಪಶ್ಚಿಮ ವಲಯ - ಎಂ.ಟಿ.ರೇಜು ಹಾಗೂ ಕೆ.ಟಿ.ಬಾಲಕೃಷ್ಣ, ದಕ್ಷಿಣ ವಲಯ - ಬಗಾದಿ ಗೌತಮ್ ಹಾಗೂ ಡಾ.ರಾಮಚಂದ್ರ, ಆರ್.ಆರ್.ನಗರ ವಲಯ - ಡಾ.ವಿ.ರಾಮ್ ಪ್ರತಾಸ್ ಮನೋಹರನ್ ಹಾಗೂ ರಾಮ್ ನಿವಾಸ್ ಸೆಪಟ್, ಯಲಹಂಕ ವಲಯ - ಏಕ್‌ರೂಪ್ ಕೌರ್ ಹಾಗೂ ರೋಹಿಣಿ ಸೆಪಟ್ ಉಸ್ತುವಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ.