ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​ ಸೇವೆ: ಮೆಟ್ರೋ ಗೋಡೆ ಚಿತ್ರದಲ್ಲಿ ಅರಳಿಸಿದ ಮಂಗಳಮುಖಿಯರು - bangalore namma metro latest news

ಕೋವಿಡ್-19 ಸಮಯದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಬಿಬಿಎಂಪಿ ಪೌರಕಾರ್ಮಿಕರ ಶ್ರಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ಭಿತ್ತಿ ಚಿತ್ರಗಳನ್ನು ಬಿಡಿಸಲಾಗಿದೆ. ಇವು ಕೊರೊನಾ ವಾರಿಯರ್ಸ್​ ಸೇವೆಯನ್ನು ಚಿತ್ರದ ಮೂಲಕ ಬಿಚ್ಚಿಡುತ್ತಿವೆ.

Corona Warriors wall painting is Attracting Everyone at Vivekananda Metro Station!
ವಿವೇಕಾನಂದ ಮೆಟ್ರೋ ನಿಲ್ದಾಣದಲ್ಲಿ ಎಲ್ಲರನ್ನು ಆಕರ್ಷಿಸುತ್ತಿದೆ ಕೋವಿಡ್ ವಾರಿಯರ್ಸ್ ಚಿತ್ರಕಥೆ

By

Published : Oct 16, 2020, 4:47 PM IST

ಬೆಂಗಳೂರು:ಮಂಗಳಮುಖಿಯರ ಕಲಾತ್ಮಕ ಪ್ರತಿಭೆಯಿಂದ ಈಗ ವಿವೇಕಾನಂದ ಮೆಟ್ರೋ ನಿಲ್ದಾಣದ ಗೋಡೆಗಳು ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ. ಕೇವಲ ಬಣ್ಣಗಳಷ್ಟೇ ಅಲ್ಲ, ಈ ಬಣ್ಣಗಳಲ್ಲಿ ಕೋವಿಡ್ ವಾರಿಯರ್ಸ್​​ನ ಶ್ರಮದ ಚಿತ್ರಗಳನ್ನು ಬಿಡಿಸಲಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಅರಳಿದ ಚಿತ್ರಗಳಿವು

ಹೌದು "ಅರವಾಣಿ ಆರ್ಟ್ ಪ್ರಾಜೆಕ್ಟ್" ನ ಮಂಗಳಮುಖಿ ಸ್ವಯಂ ಸೇವಕರು ಮೆಟ್ರೋ ನಿಲ್ದಾಣದಲ್ಲಿ ಈ ಚಿತ್ರಗಳನ್ನು ಬಿಡಿಸಿದ್ದಾರೆ. ಇಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸಂಸದ ಪಿ.ಸಿ ಮೋಹನ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​, ನಮ್ಮ ಮೆಟ್ರೋ ನಿರ್ದೇಶಕ ಅಜೇಯ್ ಸೇಥ್, ಚಿತ್ರ ನಟಿ ಸಂಯುಕ್ತ ಹೊರನಾಡ್ ಇದನ್ನು ಅನಾವರಣಗೊಳಿಸಿದರು.

ಮೆಟ್ರೋ ನಿಲ್ದಾಣದಲ್ಲಿ ಅರಳಿದ ಚಿತ್ರಗಳಿವು

ಕೋವಿಡ್-19 ಸಮಯದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಬಿಬಿಎಂಪಿ ಪೌರಕಾರ್ಮಿಕರ ಶ್ರಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ಭಿತ್ತಿ ಚಿತ್ರಗಳನ್ನು ಬಿಡಿಸಲಾಗಿದೆ.

ABOUT THE AUTHOR

...view details