ಕರ್ನಾಟಕ

karnataka

ETV Bharat / state

ನವಜಾತ ಶಿಶುಗಳ ಪಾಲಿಗೆ ಕೊರೊನಾ ವಾರಿಯರ್ಸ್​ಗಳೇ ತಾಯಂದಿರು!!

ವಾಣಿವಿಲಾಸ್ ಮಕ್ಕಳ ವಿಭಾಗದ ಪಿಜಿ ವೈದ್ಯರು ಜೋಪಾನ ಮಾಡುತ್ತಿರುವ ದೃಶ್ಯ ಎಂತಹವರನ್ನ ಕಣ್ತುಂಬುವಂತೆ ಮಾಡುತ್ತೆ. ಹಸುಗೂಸು ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸ್​ಗಳೇ ತಾಯಂದಿರಾಗಿದ್ದಾರೆ‌.‌.

ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸ್​ಗಳೇ ತಾಯಂದಿರು
ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸ್​ಗಳೇ ತಾಯಂದಿರು

By

Published : Jul 28, 2020, 9:56 PM IST

ಬೆಂಗಳೂರು :ಕೊರೊನಾ ಸೋಂಕಿತ ಗರ್ಭಿಣಿಯರ ಮಕ್ಕಳ‌ ಪಾಲಿಗೆ ವಾಣಿವಿಲಾಸ್ ಆಸ್ಪತ್ರೆ ವೈದ್ಯರೇ ಆಪತ್ಭಾಂದವರು. ಈವರೆಗೆ 157 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಕೀರ್ತಿ ವಾಣಿವಿಲಾಸ್ ವೈದ್ಯರಿಗೆ ಸಲ್ಲುತ್ತದೆ. ಇಲ್ಲಿಯವರೆಗೆ ಯಾವ ಮಕ್ಕಳು ಸೋಂಕಿಗೆ ತುತ್ತಾಗಿಲ್ಲ.

ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್​ನಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಆಗ್ತಿದ್ದಂತೆ ಟ್ರಾನ್ಸ್‌ಪೋರ್ಟ್‌ ಇನ್ಕುಬೇಷನ್ ಆ್ಯಂಬುಲೆನ್ಸ್ ಮೂಲಕ ಮಕ್ಕಳನ್ನ ವಾಣಿವಿಲಾಸ್​ಗೆ ಶಿಫ್ಟ್ ಮಾಡಲಾಗುತ್ತದೆ. ತಾಯಿಯಿಂದ ಮಗುವಿಗೆ ಸೋಂಕು ತಗುಲದಂತೆ ಎಚ್ಚರವಹಿಸಲಾಗುತ್ತದೆ.

ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸ್​ಗಳೇ ತಾಯಂದಿರು

ಟ್ರಾಮಾ ಕೇರ್ ಸೆಂಟರ್​ನಿಂದ ವಾಣಿವಿಲಾಸ್ ಐಸೋಲೇಷನ್ ವಾರ್ಡ್ ಶಿಫ್ಟ್ ಮಾಡಲಾಗುತ್ತದೆ. ಈ ವೇಳೆ 24×7 ಮಕ್ಕಳನ್ನ ತಂದು ಜೋಪಾನ ಮಾಡುವುದೇ ಸ್ಟಾಫ್ ನರ್ಸ್ ಹಾಗೂ ವೈದ್ಯರು. ವಾಣಿವಿಲಾಸ್ ಮಕ್ಕಳ ವಿಭಾಗದ ಪಿಜಿ ವೈದ್ಯರು ಜೋಪಾನ ಮಾಡುತ್ತಿರುವ ದೃಶ್ಯ ಎಂತಹವರನ್ನ ಕಣ್ತುಂಬುವಂತೆ ಮಾಡುತ್ತೆ. ಹಸುಗೂಸು ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸ್​ಗಳೇ ತಾಯಂದಿರಾಗಿದ್ದಾರೆ‌.‌ ಹಾಲಿನ ಪೌಡರ್ ಬಳಸಿ ಮಕ್ಕಳಿಗೆ ಹಾಲುಣಿಸುವುದು, ಮಕ್ಕಳನ್ನ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಈವರೆಗೆ ಆಗಿರುವ 157 ಹೆರಿಗೆಯಲ್ಲಿ ಯಾವುದು ಪ್ರಾಣಾಪಾಯ ಆಗಿಲ್ಲ. ಎಲ್ಲಾ ತಾಯಂದಿರು ಮಕ್ಕಳು ಕೂಡ ಸುರಕ್ಷಿತವಾಗಿದ್ದಾರೆ. ತಾಯಿ ನೆಗೆಟಿವ್ ಆಗಿ ಗುಣಮುಖ ಆಗ್ತಿದ್ದಂತೆ ಮಗುವನ್ನು ತಾಯಿ ಜೊತೆ ಡಿಸ್ಚಾರ್ಜ್ ಮಾಡಲಾಗುತ್ತದೆ.

ABOUT THE AUTHOR

...view details