ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಕಾನ್ಸ್ಟೇಬಲ್ ಅವರ ತಾಯಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ. ಇಹಲೋಕ ತ್ಯಜಿಸಿದ ತಾಯಿ ಕಂಡು ಮಗ ಕಣ್ಣೀರು ಸುರಿಸಿದ ಘಟನೆ ನಗರದಲ್ಲಿ ನಡೆದಿದ್ದು, ಈ ದೃಶ್ಯ ಮನಕಲಕುವಂತಿದೆ.
ಕೊರೊನಾದಿಂದ ತಾಯಿ ಕಳೆದುಕೊಂಡ ವಾರಿಯರ್ : ಚಿತಾಗಾರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಪೊಲೀಸ್ - Corona in Bangalore
ತಾಯಿ ಕೊರೊನಾದಿಂದ ಮೃತಪಟ್ಟ ಹಿನ್ನೆಲೆ ಕೊರೊನಾ ವಾರಿಯರ್ ಆಗಿರುವ ಪೊಲೀಸ್ವೋರ್ವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಮನಕಲಕುವ ಘಟನೆ ಬೆಂಗಳೂರಿನ ಸುಮನಹಳ್ಳಿ ಚಿತಾಗಾರದ ಬಳಿ ನಡೆದಿದೆ.
![ಕೊರೊನಾದಿಂದ ತಾಯಿ ಕಳೆದುಕೊಂಡ ವಾರಿಯರ್ : ಚಿತಾಗಾರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಪೊಲೀಸ್ corona-warrior-police-lost-his-mother-due-to-corona](https://etvbharatimages.akamaized.net/etvbharat/prod-images/768-512-11500685-thumbnail-3x2-vis.jpg)
ಹಲಸೂರು ಗೇಟ್ ಪೊಲೀಸ್ ಠಾಣೆಯ ಸಿಬ್ಬಂದಿಯ ತಾಯಿ ಲಕ್ಷ್ಮೀ ಅವರನ್ನು ಉಸಿರಾಟದ ತೊಂದರೆಯಿಂದ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಆದ್ರೆ ಬೆಡ್ ಕೊರತೆಯಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗ್ತಿದೆ. ನಿರಂತರ ಪ್ರಯತ್ನದ ಬಳಿಕ ಅಂತಿಮವಾಗಿ ವಿಜಯನಗರದ ಖಾಸಗಿ ಆಸ್ಪತ್ರೆ ದಾಖಲಿಸಿದ್ದಾರೆ. ದಾಖಲಾದ ಒಂದೇ ದಿನಕ್ಕೆ 1.14 ಲಕ್ಷ ರೂ. ಬಿಲ್ ಮಾಡಿದ್ದಾರೆ. ಆದರೆ ಸರಿಯಾದ ಆಕ್ಸಿಜನ್ ಸಿಗದೆ ಬುಧವಾರ ಲಕ್ಷ್ಮೀ ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ 10 ಗಂಟೆಯಿಂದ ಸುಮನಹಳ್ಳಿ ಚಿತಾಗಾರದದಲ್ಲಿ ಮೃತದೇಹ ಸುಡಲು ಕಾದಿದ್ದರೂ ಅಂತ್ಯಕ್ರಿಯೆ ನಡೆಸಲು ಆಗಲಿಲ್ಲ ಎಂದು ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ವಾರಿಯರ್ಸ್ ಕುಟುಂಬಕ್ಕೆ ಈ ಗತಿ ಬಂದಿದೆ. ಎಷ್ಟೇ ಅಲೆದರೂ ಒಂದು ವೆಂಟಿಲೇಟರ್ ಇರುವ ಬೆಡ್ ಸಿಗಲಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಮ್ಮ ಹೆಂಡತಿ ಮಕ್ಕಳನ್ನ ಮಾತ್ರ ಕಾಪಾಡಿಕೊಳ್ಳಲಿ. ನಮಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಮೃತರ ಸಂಬಂಧಿಗಳು ಬೇಸರ ಹೊರಹಾಕಿದ್ದಾರೆ.