ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಕೊರೊನಾ ಭೀತಿ: ಇಂದಿನಿಂದ ಟೆಕ್ಕಿ ಅಪಾರ್ಟ್​ಮೆಂಟ್​​ನಲ್ಲಿ ತಪಾಸಣೆ - corona virus in bangalore

ತೆಲಂಗಾಣ ಮೂಲದ ಟೆಕ್ಕಿ ವಾಸವಿದ್ದ ಅಪಾರ್ಟ್‍ಮೆಂಟ್ ಪೂರ್ತಿ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.‌ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ 80 ಕುಟುಂಬಗಳ ಸದಸ್ಯರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆಗೆ ಒಳಪಡಿಸಲಿದ್ದಾರೆ.

health department take checkups
ಅಪಾರ್ಟ್​ಮೆಂಟ್​ ಆರೋಗ್ಯ ಸಮೀಕ್ಷೆ

By

Published : Mar 4, 2020, 2:02 AM IST

ಬೆಂಗಳೂರು: ತೆಲಂಗಾಣ ಮೂಲದ ಟೆಕ್ಕಿ ವಾಸವಿದ್ದ ಅಪಾರ್ಟ್‍ಮೆಂಟ್ ಪೂರ್ತಿ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.‌ ಕೊರೊನಾ ಸೋಂಕಿತ ಟೆಕ್ಕಿ ವಾಸವಿದ್ದ ಅಪಾರ್ಟ್‍ಮೆಂಟ್‍ನಲ್ಲಿ ಒಟ್ಟು 92 ಮನೆಗಳಿದ್ದು, 80ರಲ್ಲಿ ಜನ ವಾಸವಿದ್ದಾರೆ.

ಅಪಾರ್ಟ್​ಮೆಂಟ್​ ಆರೋಗ್ಯ ಸಮೀಕ್ಷೆ

ಮಾರ್ಚ್​ 3ರ ಬೆಳಗ್ಗೆಯಿಂದಲೇ 25ಕ್ಕೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿ ಅಪಾರ್ಟ್​ಮೆಂಟ್​ಗೆ ತೆರಳಿ, ನಿವಾಸಿಗಳ ಆರೋಗ್ಯ ಪರೀಕ್ಷೆಗೆ ಮುಂದಾಗಿದ್ದಾರೆ. ಆರೋಗ್ಯ ಇಲಾಖೆ ಮಳಿಗೆ ತೆರೆದು, ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ನಿವಾಸಿಗಳಲ್ಲಿ ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಇದ್ದರೆ ಕೂಡಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮಾ.4ರಂದು ಬೆಳಗ್ಗೆಯಿಂದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರಿಂದ ಪ್ರತಿ ಮನೆಯ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸೋಂಕಿನ ಲಕ್ಷಣ ಪತ್ತೆಯಾದರೆ ಶೀಘ್ರವೇ ರಾಜೀವ್‍ಗಾಂಧಿ ಆಸ್ಪತ್ರೆಗೆ ಕಳಿಸಲಾಗುತ್ತದೆ ಎಂದು ತಪಾಸಣಾ ತಂಡದ ನೇತೃತ್ವ ವಹಿಸಿರುವ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details