ಬೆಂಗಳೂರು: ಕೊರೊನಾ ವೈರಸ್ ತೀವ್ರತೆ ಇಡೀ ವಿಶ್ವವನ್ನೇ ನಡುಗಿಸಿದೆ. ಸದ್ಯ ಕರ್ನಾಟಕದಲ್ಲಿ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ರಾಜ್ಯವೇ ಸ್ತಬ್ಧವಾಗಲಿದೆ.
ಕೊರೊನಾ ಎಫೆಕ್ಟ್: ಮೆಟ್ರೋ ಖಾಲಿ ಖಾಲಿ, ವೋಲ್ವೋ ಬಸ್ನತ್ತ ಮುಖ ಮಾಡದ ಪ್ರಯಾಣಿಕರು - ಕೊರೊನಾ ವೈರಸ್ ಭೀತಿ
ಬೆಂಗಳೂರಿನಲ್ಲಿ ಕೊರೊನಾ ವೈರಸ್ ಭೀತಿಯಿಂದ ಉದ್ಯಾನ, ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ಸ್ಥಳಗಳು ಜನರಿಲ್ಲದೇ ಬಣಗುಡುತ್ತಿವೆ. ನಮ್ಮ ಮೆಟ್ರೋದಲ್ಲೂ ಕೂಡ ಪ್ರಯಾಣಿಕರ ಸಂಖ್ಯೆ ತೀವ್ರ ಕ್ಷೀಣಿಸಿದೆ.
ಈಗಾಗಲೇ ಉದ್ಯಾನ, ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ಸ್ಥಳಗಳು ಜನರಿಲ್ಲದೇ ಬಣಗುಡುತ್ತಿವೆ. ಇತ್ತ ನಮ್ಮ ಮೆಟ್ರೋದಲ್ಲೂ ಪ್ರಯಾಣಿಕರಿಲ್ಲದೇ ಇರುವುದು ಕಂಡು ಬಂತು. ವೀಕೆಂಡ್ ಸಮಯದಲ್ಲಿ ಲಕ್ಷಾಂತರ ಜನ ಪ್ರಯಾಣಿಸುತ್ತಿದ್ದು ನಮ್ಮ ಮೆಟ್ರೋ ಬಣಗುಡುತ್ತಿದೆ.
ಮತ್ತೊಂದು ಕಡೆ, ಬಿಎಂಟಿಸಿ ಬಸ್ಗಳೂ ಕೂಡ ಬೆಳಗ್ಗೆಯಿಂದ ಪ್ರಯಾಣಿಕರಿಲ್ಲದೇ ಖಾಲಿ ಖಾಲಿ ಸಂಚಾರ ಮಾಡುತ್ತಿವೆ. ಕೊರೊನಾ ಭೀತಿಯಿಂದ ಮನೆಯಿಂದಲೇ ಬೆಂಗಳೂರು ಮಂದಿ ಹೊರಗೆ ಬರುತ್ತಿಲ್ಲ. ಬಿಎಂಟಿಸಿಯಲ್ಲಿ ನಿತ್ಯ 6,500 ಬಸ್ಗಳು ಸಂಚಾರ ಮಾಡುತ್ತಿದ್ದು, ಅದರಲ್ಲೂ ಏರ್ಪೋರ್ಟ್ಗೆ ಹೋಗುವ ವೋಲ್ವೋ ಬಸ್ನಲ್ಲಿ ಪ್ರಯಾಣ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ವೋಲ್ವೋ ಬಸ್ಗಳಲ್ಲಿ ಎಸಿ ಇರುವ ಕಾರಣದಿಂದ ಏರ್ಪೋರ್ಟ್, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಬನ್ನೇರುಘಟ್ಟ ಕಡೆ ಸಂಚಾರ ಮಾಡುವ ವೋಲ್ವೋ ಬಸ್ಗಳಲ್ಲಿ ಪ್ರಯಾಣಿಕರೇ ಇಲ್ಲದಂತಾಗಿದೆ. ಹೀಗಾಗಿ, ಪರಿಸ್ಥಿತಿ ನೋಡಿಕೊಂಡು ಬಸ್ಗಳ ಸಂಖ್ಯೆ ಕಡಿತಗೊಳಿಸಲು ಬಿಎಂಟಿಸಿ ತೀರ್ಮಾನ ಮಾಡಿದೆ.